ದೇಶ

ವುಹಾನ್ ಲ್ಯಾಬ್ ನಲ್ಲಿ 3 ಜೀವಂತ ಕೊರೋನಾ ವೈರಸ್ ಪ್ರಭೇದ, ಆದರೆ ಕೋವಿಡ್-19 ಗೆ ಹೊಂದಾಣಿಕೆಯಾಗುತ್ತಿಲ್ಲ!

ಚೀನಾದ ವುಹಾನ್ ಲ್ಯಾಬ್ ಮನುಕುಲಕ್ಕೆ ದುಸ್ವಪ್ನವಾಗಿ ಕಾಡುತ್ತಿದ್ದು, ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಆಗಾಗ್ಗೆ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಹೊರಹಾಕುತ್ತಿದೆ.

ವುಹಾನ್ ಲ್ಯಾಬ್ ನಲ್ಲಿ 3 ಜೀವಂತ ಕೊರೋನಾ ವೈರಸ್ ಪ್ರಭೇದ, ಆದರೆ ಕೋವಿಡ್-19 ಗೆ ಹೊಂದಾಣಿಕೆಯಾಗುತ್ತಿಲ್ಲ!
ವೈರಸ್ (ಸಂಗ್ರಹ ಚಿತ್ರ)
Published On :

ಬೀಜಿಂಗ್: ಚೀನಾದ ವುಹಾನ್ ಲ್ಯಾಬ್ ಮನುಕುಲಕ್ಕೆ ದುಸ್ವಪ್ನವಾಗಿ ಕಾಡುತ್ತಿದ್ದು, ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಆಗಾಗ್ಗೆ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಹೊರಹಾಕುತ್ತಿದೆ. 

ಇತ್ತೀಚಿನ ವರದಿಯ ಪ್ರಕಾರ ವುಹಾನ್ ಲ್ಯಾಬ್ ನಲ್ಲಿ ಕೊರೋನಾ ವೈರಸ್ ನ 3 ಜೀವಂತ ವೈರಸ್ ಪ್ರಭೇದಗಳು ಪತ್ತೆಯಾಗಿದೆ. ಆದರೆ ಈ ಮೂರೂ ಪ್ರಭೇದದ ವೈರಾಣುಗಳು ಕೋವಿಡ್-19 ರೋಗ ಉಂಟುಮಾಡುವ ವೈರಾಣುಗಳಿಗೆ ಹೊಂದಾಣಿಕೆಯಾಗುತ್ತಿಲ್ಲ. 

ಇದು ಹೊಸ ಮಾಹಿತಿಯಾಗಿದ್ದು, ಅಲ್ಲಿನ ನಿರ್ದೇಶಕರೇ ಇದನ್ನು ಬಹಿರಂಗಪಡಿಸಿದ್ದಾರೆ. ಚೀನಾದ ಸರ್ಕಾರಿ ಸ್ವಾಮ್ಯದ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ವುಹಾನ್ ಲ್ಯಾಬ್ ನ ನಿರ್ದೇಶಕ ವಾಂಗ್ ಯಾನ್ಯಿ, ಸಾರ್ಸ್ ಸಿಒವಿ-2 ತಮ್ಮ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂಬುದು ಕಟ್ಟು ಕಥೆ ಎಂದು ಹೇಳಿದ್ದಾರೆ.    

ಈ ವೈರಸ್ ಪ್ರಾರಂಭವಾಗಿದ್ದು ವನ್ಯಜೀವಿಗಳಿಂದ ಎಂಬುದು ಅಂತಾರಾಷ್ಟ್ರೀಯ ಸಮುದಾಯದ ಅಭಿಪ್ರಾಯವಾಗಿದೆ. ಈ ವೈರಾಣುಗಳ ಬಗ್ಗೆ ಉತ್ತರ ಕಂಡುಕೊಳ್ಳಲು ಜಾಗತಿಕ ಮಟ್ಟದಲ್ಲಿ ಸಹಕಾರ ಅತ್ಯಗತ್ಯ ಎಂದು ಹೇಳಿದ್ದಾರೆ.  

ಈಗ ನಮ್ಮಲ್ಲಿ ಜೀವಂತ ವೈರಾಣುಗಳ 3 ಪ್ರಭೇದಗಳಿವೆ ಈ ಪೈಕಿ ಒಂದರಲ್ಲಿ ಸಾರ್ಸ್ ವೈರಸ್ ಗೆ ಶೇ.96 ರಷ್ಟು ಸಾಮ್ಯತೆ ಇದೆ ಆದರೆ ಕೋವಿಡ್-19 ಗೆ ಸಾಮ್ಯತೆಗಳು ಕಡಿಮೆ ಇವೆ ಎಂದು ವಾಂಗ್ ಯಾನ್ಯಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.