ಮಹಾರಾಷ್ಟ್ರ,ಪಂಜಾಬ್ ನಂತರ ತಮಿಳುನಾಡಿನಲ್ಲೂ ಮೇ 31ರವರೆಗೂ ಲಾಕ್ ಡೌನ್ ವಿಸ್ತರಣೆ
ಮೇ 31ರವರೆಗೂ ಕೋವಿಡ್- 19 ಲಾಕ್ ಡೌನ್ ನ್ನು ತಮಿಳುನಾಡು ಸರ್ಕಾರ ವಿಸ್ತರಿಸಿದೆ.ಇದಕ್ಕೂ ಮುನ್ನ ಮಹಾರಾಷ್ಟ್ರ ಹಾಗೂ ಪಂಜಾಬ್ ಸರ್ಕಾರಗಳು ಕೂಡಾ ತಮ್ಮ ರಾಜ್ಯಗಳಲ್ಲಿ ಈ ಮಾಸಾಂತ್ಯದವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ್ದವು.

ಚೆನ್ನೈ: ಮೇ 31ರವರೆಗೂ ಕೋವಿಡ್- 19 ಲಾಕ್ ಡೌನ್ ನ್ನು ತಮಿಳುನಾಡು ಸರ್ಕಾರ ವಿಸ್ತರಿಸಿದೆ.ಇದಕ್ಕೂ ಮುನ್ನ ಮಹಾರಾಷ್ಟ್ರ ಹಾಗೂ ಪಂಜಾಬ್ ಸರ್ಕಾರಗಳು ಕೂಡಾ ತಮ್ಮ ರಾಜ್ಯಗಳಲ್ಲಿ ಈ ಮಾಸಾಂತ್ಯದವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ್ದವು.
ತಮಿಳುನಾಡಿನಲ್ಲಿ 10 ಸಾವಿರ ಕೋವಿಡ್-19 ಕೇಸ್ ಗಳು ವರದಿಯಾಗಿದ್ದು, 74 ಮಂದಿ ಮೃತಪಟ್ಟಿದ್ದಾರೆ. ಮೇ ಮಾಸಾಂತ್ಯದವರೆಗೂ ಶಾಲಾ, ಕಾಲೇಜುಗಳು, ಪೂಜಾ ಸ್ಥಳಗಳು, ಚಿತ್ರಮಂದಿರಗಳು ಮತ್ತು ಬಾರ್ ಗಳು ಬಂದ್ ಆಗಿರುತ್ತವೆ.
ಆದಾಗ್ಯೂ, ಕೊಯಂಬತ್ತೂರು, ಸೆಲಂ, ತ್ರಿಚಿ ಮತ್ತು ನೀಲಗಿರಿ ಸೇರಿದಂತೆ 25 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಇ- ಪಾಸ್ ಇಲ್ಲದೆ ಅತ್ಯವಶ್ಯಕ ಸೇವೆ ನೀಡುವ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


