ದೇಶ

ಕೋವಿಡ್-19 ಗೆದ್ದ ದೆಹಲಿ ವೈದ್ಯೆಗೆ ನೆರೆಯವರಿಂದ ಬೈಗುಳ, ಬೆದರಿಕೆ! 

ಕೋವಿಡ್-19 ನ್ನು ಗೆದ್ದ ಜನರನ್ನು ಸಮಾಜದಲ್ಲಿನ ಕೆಲವರು ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಇಂತಹದ್ದೇ ಪರಿಸ್ಥಿತಿಯನ್ನು ದೆಹಲಿಯ ವೈದ್ಯೆಯೊಬ್ಬರು ಎದುರಿಸಿದ್ದಾರೆ.

ಕೋವಿಡ್-19 ಗೆದ್ದ ದೆಹಲಿ ವೈದ್ಯೆಗೆ ನೆರೆಯವರಿಂದ ಬೈಗುಳ, ಬೆದರಿಕೆ! 
ಕೋವಿಡ್-19 ಗೆದ್ದ ದೆಹಲಿ ವೈದ್ಯೆಗೆ ನೆರೆಯವರಿಂದ ಬೈಗುಳ, ಬೆದರಿಕೆ!
Published On :

ನವದೆಹಲಿ: ಕೋವಿಡ್-19 ನ್ನು ಗೆದ್ದ ಜನರನ್ನು ಸಮಾಜದಲ್ಲಿನ ಕೆಲವರು ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಇಂತಹದ್ದೇ ಪರಿಸ್ಥಿತಿಯನ್ನು ದೆಹಲಿಯ ವೈದ್ಯೆಯೊಬ್ಬರು ಎದುರಿಸಿದ್ದಾರೆ. 

ಅರುಣಾ ಆಸೀಫ್ ಅಲಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯೆ ಕ್ವಾರಂಟೈನ್ ಮುಕ್ತಾಯಗೊಳಿಸಿದ ಬಳಿಕ ಮನೆಗೆ ವಾಪಸ್ ಬಂದಿದ್ದರು. ಆದರೆ ಮನೆಗೆ ಬಂದಿದ್ದ ವೈದ್ಯೆಗೆ ನೆರೆ ಮನೆಯವರು ಕಿರುಕುಳ ನೀಡಿದ್ದು, ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವೈದ್ಯೆ ಮನೆಗೆ ಪ್ರವೇಶಿಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆ ವೈಎಂಸಿಎ ಐಸೊಲೇಷನ್ ಕೇಂದ್ರದಲ್ಲಿದ್ದು ಕೋವಿಡ್-19 ನೆಗೆಟೀವ್ ಬಂದ ನಂತರ ಪ್ಲಾಟ್ ಗೆ ಆಗಮಿಸಿದರು.

ಆದರೆ ಮತ್ತೆ ಆಕೆಗೆ ನೆರೆಯವರು ಕಿರುಕುಳ ನೀಡಿದ್ದು, ಬೆದರಿಕೆ ಹಾಕಿದ್ದಾರೆ, ಈ ಬಗ್ಗೆ ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ (ಆರ್ ಡಬ್ಲ್ಯೂಎ) ಜೊತೆಗೂ ಮಾತನಾಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.