ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್ ಕ್ರ್ಯಾಶ್
ಬಹುಸಂಖ್ಯೆಯ ಜನರು ಆನ್ ಲೈನ್ ಗೆ ಬಂದು ನಾಗರಿಕ ವಿಮಾನಯಾನ ತಾಣಕ್ಕೆ ಭೇಟಿ ನೀಡಿದ್ದ ಕಾರಣ ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್ ಕ್ರ್ಯಾಶ್ ಆಗಿದೆ

ನವದೆಹಲಿ: ಬಹುಸಂಖ್ಯೆಯ ಜನರು ಆನ್ ಲೈನ್ ಗೆ ಬಂದು ನಾಗರಿಕ ವಿಮಾನಯಾನ ತಾಣಕ್ಕೆ ಭೇಟಿ ನೀಡಿದ್ದ ಕಾರಣ ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್ ಕ್ರ್ಯಾಶ್ ಆಗಿದೆ
"ಬಹುಸಂಖ್ಯೆಯಲ್ಲಿ ಜನರು ಜಾಲತಾಣಕ್ಕೆ ಭೇಟಿ ನಿಡಿದ್ದ ಕಾರಣ ನಾಗರಿಕ ವಿಮಾನಯಾನ ಸಚಿವಾಲಯ ವೆಬ್‌ಸೈಟ್ ಡೌನ್ ಆಗಿದೆ ಎನ್‌ಐಸಿ ತಂಡ ಈ ಸಂಬಂಧ ಕಾರ್ಯನಿರತವಾಗಿದ್ದು ವಿದೇಶದಲ್ಲಿನ ಭಾರತಈಯರ ಕರೆತರುವ ವಿಮಾನಗಳ ವಿವರಗಳನ್ನು ಶೀಘ್ರದಲ್ಲೇ ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ ಅಲ್ಲಿಂದಲೇ ನೇರವಾಗಿ ಪರಿಶೀಲಿಸಿರಿ, ಆಗಿರುವ ಅಡಚಣೆಗಾಗಿ ನಾವು ವಿಷಾದಿಸುತ್ತೇವೆ." ಸಚಿವಾಲಯ ಟ್ವೀಟ್ ಮಾಡಿದೆ.
ದೇಶದಲ್ಲಿ ಕೊರೋನಾವೈರಸ್ ಮಧ್ಯೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಾಹಕಗಳು 443 ವಿಮಾನಗಳನ್ನು 'ಲೈಫ್‌ಲೈನ್ ಉಡಾನ್' ಅಡಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಎಂಸಿಎ ಸೋಮವಾರ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


