ದೇಶ

ಕನಸಿನಲ್ಲಿ ಬಂದ ಶಿವ, ತನ್ನ ಮರ್ಮಾಂಗವನ್ನೇ ಅರ್ಪಿಸಿದ ಕೈದಿ, ಸಾವು-ಬದುಕಿನ ಹೋರಾಟ!

25 ವರ್ಷದ ಕೈದಿಯೊಬ್ಬ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕನಸಿನಲ್ಲಿ ಬಂದ ಶಿವ, ತನ್ನ ಮರ್ಮಾಂಗವನ್ನೇ ಅರ್ಪಿಸಿದ ಕೈದಿ, ಸಾವು-ಬದುಕಿನ ಹೋರಾಟ!
ಶಿವ ಪರಮಾತ್ಮ
Published On :

ಗ್ವಾಲಿಯಾರ್: 25 ವರ್ಷದ ಕೈದಿಯೊಬ್ಬ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಮಧ್ಯಪ್ರದೇಶದ ಗ್ವಾಲಿಯಾರ್ ನಗರದ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ವಿಷ್ಣು ಕುಮಾರ್ ಎಂಬಾತ ಕೊಲೆ ಪ್ರಕರಣ ಸಂಬಂಧ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಬೆಳಗ್ಗೆ 6.30ರ ಸುಮಾರಿಗೆ ಆತ ಕಾರಾಗೃಹದಲ್ಲಿರುವ ಶಿವನ ದೇವಸ್ಥಾನದ ಮುಂದೆ ಪ್ರಾರ್ಥಿಸಿ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ ಎಂದು ಜೈಲು ಅಧೀಕ್ಷಕ ಮನೋಜ್ ಸಾಹು ಹೇಳಿದ್ದಾರೆ. 

ತೀವ್ರ ನೋವಿನಿಂದ ಅಳುತ್ತಿದ್ದ ವಿಷ್ಣು ಕುಮಾರ್ ನನ್ನು ಗಮನಿಸಿದ ಸಹ ಕೈದಿಗಳು ಜೈಲು ಅಧೀಕ್ಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಲ್ಲಿಗೆ ಬಂದ ಅಧಿಕಾರಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ. ಇನ್ನು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ತಮ್ಮ ಮರ್ಮಾಂಗವನ್ನು ಕತ್ತರಿಸಿಕೊಂಡ ಬಗ್ಗೆ ವಿಚಾರಿಸಿದಾಗ ಸಾಹು, ತನ್ನ ಕನಸಿನಲ್ಲಿ ಶಿವ ಪರಮಾತ್ಮ ಬಂದಿದ್ದು ಅವನ ಇಚ್ಛೆಯಂತೆ ನಾನು ನನ್ನ ಮರ್ಮಾಂಗವನ್ನು ಅರ್ಪಿಸಿದ್ದೇನೆ ಎಂದು ಹೇಳಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.