ದೇಶ

ಡಿಆರ್‌ಡಿಒ ನಿಂದ ‘ಅಲ್ಟ್ರಾ ವೈಲೆಟ್’ ಸೋಂಕು ನಿರೋಧಕ ಸಿಂಪಡಣೆ ಗೋಪುರ

ಕೊರೊನವೈರಸ್‍ ಹೆಚ್ಚು ತೀವ್ರವಾಗಿರುವ ಪ್ರದೇಶಗಳಲ್ಲಿ ರಾಸಾಯನಿಕ ಮುಕ್ತ ಅಲ್ಟ್ರಾ ವೈಲೆಟ್ (ಯುವಿ) ಸೋಂಕು ನಿರೋಧಕ ಸಿಂಪಡಣೆ ಗೋಪುರವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

ಡಿಆರ್‌ಡಿಒ ನಿಂದ ‘ಅಲ್ಟ್ರಾ ವೈಲೆಟ್’ ಸೋಂಕು ನಿರೋಧಕ ಸಿಂಪಡಣೆ ಗೋಪುರ
ಡಿಆರ್‌ಡಿಒ ನಿಂದ ‘ಅಲ್ಟ್ರಾ ವೈಲೆಟ್’ ಸೋಂಕು ನಿರೋಧಕ ಸಿಂಪಡಣೆ ಗೋಪುರ
Published On :

ಬಾಲಸೋರ್: ಕೊರೊನವೈರಸ್‍ ಹೆಚ್ಚು ತೀವ್ರವಾಗಿರುವ ಪ್ರದೇಶಗಳಲ್ಲಿ ರಾಸಾಯನಿಕ ಮುಕ್ತ ಅಲ್ಟ್ರಾ ವೈಲೆಟ್ (ಯುವಿ) ಸೋಂಕು ನಿರೋಧಕ ಸಿಂಪಡಣೆ ಗೋಪುರವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

‘ಯುವಿ ಬ್ಲಾಸ್ಟರ್’ ಹೆಸರಿನ ಈ ಸಾಧನ, ಅಲ್ಟ್ರಾವೈಲಟ್‍ ಆಧಾರಿತ ಸ್ಯಾನಿಟೈಸರ್ ಆಗಿದ್ದು ಇದನ್ನು ದೆಹಲಿ ಮೂಲದ ಡಿಆರ್‍ ಡಿಓ ಪ್ರಧಾನ ಪ್ರಯೋಗಾಲಯವಾದ ಲೇಸರ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ (ಲಾಸ್ಟೆಕ್) ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿದೆ. ಗುರುಗ್ರಾಮ್‍ ನ ನ್ಯೂ ಏಜ್ ಇನ್ಸ್ಟ್ರುಮೆಂಟ್ಸ್ ಅಂಡ್ ಮೆಟೀರಿಯಲ್ಸ್ ಸಂಸ್ಥೆ ಇದಕ್ಕೆ ನೆರವು ಒದಗಿಸಿದೆ ಎಂದು ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.