ದೇಶ

ಕೇಂದ್ರ ತಂಡದ ಎಸ್ಕಾರ್ಟ್ ವಾಹನದ ಬಿಎಸ್ಎಫ್ ಚಾಲಕನಿಗೆ ಕೊವಿಡ್-19 ಪಾಸಿಟಿವ್

ಕೋಲ್ಕತಾ ಮತ್ತು ಇತರೆ ಪ್ರದೇಶಗಳಿಗೆ ಭೇಟಿ ನೀಡಿದ ಅಂತರ್-ಸಚಿವಾಲಯದ ಕೇಂದ್ರ ತಂಡದ ಎಸ್ಕಾರ್ಟ್ ವಾಹನದ ಬಿಎಸ್ಎಫ್ ಚಾಲಕನಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಕೊವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇಂದ್ರ ತಂಡದ ಎಸ್ಕಾರ್ಟ್ ವಾಹನದ ಬಿಎಸ್ಎಫ್ ಚಾಲಕನಿಗೆ ಕೊವಿಡ್-19 ಪಾಸಿಟಿವ್
ಸಾಂದರ್ಭಿಕ ಚಿತ್ರ
Published On :

ಕೋಲ್ಕತಾ: ಕೋಲ್ಕತಾ ಮತ್ತು ಇತರೆ ಪ್ರದೇಶಗಳಿಗೆ ಭೇಟಿ ನೀಡಿದ ಅಂತರ್-ಸಚಿವಾಲಯದ ಕೇಂದ್ರ ತಂಡದ ಎಸ್ಕಾರ್ಟ್ ವಾಹನದ ಬಿಎಸ್ಎಫ್ ಚಾಲಕನಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಕೊವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಎಸ್ಎಫ್ ಚಾಲಕನ ಸಂಪರ್ಕದಲ್ಲಿದ್ದ ಸುಮಾರು 50 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಆ ಪೈಕಿ 20 ಸಿಬ್ಬಂದಿಯನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ಆರು ಸದಸ್ಯರ ಕೇಂದ್ರ ತಂಡ ಕೋಲ್ಕತಾದ ಬಿಎಸ್ಎಫ್ ಅತಿಥಿ ಗೃಹದಲ್ಲಿ ತಂಗಿತ್ತು. ಆ ತಂಡಕ್ಕೆ ಬೇಕಾದ ವಾಹನ, ಆಹಾರ ಮತ್ತು ಭದ್ರತಾ ವ್ಯವಸ್ಥೆಯನ್ನು ಅರೆ ಸೇನಾಪಡೆಯೇ ಮಾಡಿತ್ತು.

ಪಶ್ಚಿಮ ಬಂಗಾಳದಲ್ಲಿ ಕೊವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಲು ಬಂದಿದ್ದ ಕೇಂದ್ರ ತಂಡ ಸೋಮವಾರ ದೆಹಲಿಗೆ ಪಾಪಸ್ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.