ಕೊರೋನಾ ವೈರಸ್: ರೆಡ್ ಝೋನ್'ನಲ್ಲಿ ದೇಶದ 130 ಪ್ರಮುಖ ನಗರಗಳು; ಪಟ್ಟಿಯಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈಗೂ ಸ್ಥಾನ!
ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಈ ವರೆಗೂ 35 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಸೋಂಕು ಅಪಾಯಕಾರಿ ಮಟ್ಟದಲ್ಲಿರುವ ಪ್ರದೇಶಗಳನ್ನು ಗುರುತಿಸಿರುವ ಕೇಂದ್ರ ಸರ್ಕಾದ ರೆಜ್, ಆರೆಂಜ್, ಗ್ರೀನ್ ಝೋನ್ ಎಂದು ಮೂರು ವಿಭಾಗಗಳಾಗಿ ಪಟ್ಟಿ ಮಾಡಿದೆ.

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಈ ವರೆಗೂ 35 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಸೋಂಕು ಅಪಾಯಕಾರಿ ಮಟ್ಟದಲ್ಲಿರುವ ಪ್ರದೇಶಗಳನ್ನು ಗುರುತಿಸಿರುವ ಕೇಂದ್ರ ಸರ್ಕಾದ ರೆಜ್, ಆರೆಂಜ್, ಗ್ರೀನ್ ಝೋನ್ ಎಂದು ಮೂರು ವಿಭಾಗಗಳಾಗಿ ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ತೀವ್ರ ಅಪಾಯಕಾರಿಯಾಗಿರುವ ರೆಡ್ ಝೋನ್ ನಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ದೇಶದ ಪ್ರಮುಖ 130 ನಗರಗಳನ್ನು ಸೇರ್ಪಡೆಗೊಳಿಸಿದೆ.
ವೈರಸ್ ಸೋಂಕಿನ ತೀವ್ರತೆಯ ಆಧಾರದ ಮೇಲೆ ಈ ಮೂರು ಪಟ್ಟಿಗಳನ್ನು ಮಾಡಲಾಗಿತ್ತು, ರೆಡ್ ಝೋನ್, ಆರೆಂಜ್ ಝೋನ್ ಮತ್ತು ಗ್ರೀನ್ ಝೋನ್ ಗಳನ್ನು ಪಟ್ಟಿ ಮಾಡಲಾಗಿದೆ. ರೆಡ್ ಝೋನ್ ನಲ್ಲಿ ಸೋಂಕಿನ ತೀವ್ರತೆ ಅಪಾಯಕಾರಿ ಮಟ್ಟದಲ್ಲಿರುತ್ತದೆ. ಬೆರಳೆಣಿಕೆ ಪ್ರಕರಣಗಳಿರುವುದು ಆರೆಂಜ್ ಪಟ್ಟಿಯಲ್ಲಿವೆ. ಕಳೆದ 15 ದಿನಗಳಿಂದ ಒಂದು ಪ್ರಕರಣ ದಾಖಲಾಗದೆ ಇರುವ ಪ್ರದೇಶಗಳನ್ನು ಗ್ರೀನ್ ಝೋನ್'ಗೆ ಸೇರಿಲಾಸಲಾಗಿದೆ. ಒಟ್ಟು 733 ಜಿಲ್ಲೆಗಳನ್ನು ಈ ಮೂರು ಪಟ್ಟಿಗೆ ವಿಭಾಗಿಸಲಾಗಿದೆ.
ರೆಡ್ ಝೋನ್ ಪಟ್ಟಿಯಲ್ಲಿ ದೇಶದ 130 ಜಿಲ್ಲೆಗಳಿವೆ. ಅದರಲ್ಲಿ ಕರ್ನಾಟಕದ ಮೂರು ಜಿಲ್ಲೆಗಳಿವೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ಕೆಂಪು ವಲಯದಲ್ಲಿವೆ.
ಇದರಂತೆ ಬಹುತೇಕ ಮೆಟ್ರೋಪೊಲಿಟನ್ ನಗರಗಳು ಕೆಂಪು ವಲಯದಲ್ಲಿವೆ. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್, ಅಹಮದಾಬಾದ್ ನಗರಗಳು ಈ ಪಟ್ಟಿಯಲ್ಲಿವೆ. ಉತ್ತರಪ್ರದೇಶದ 19 ಜಿಲ್ಲೆಗಳೂ ಕೂಡ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಹಾಗೆಯೇ ಮಹಾರಾಷ್ಟ್ರ ತಮಿಳುನಾಡು ಮತ್ತು ದೆಹಲಿ ರಾಜ್ಯಗಳ 10ಕ್ಕೂ ಹೆಚ್ಚು ಜಿಲ್ಲೆಗಳು ಕೆಂಪು ಪಟ್ಟಿಯಲ್ಲಿವೆ.
ಇನ್ನೂ ಆರೆಂಜ್ ಪಟ್ಟಿಯಲ್ಲಿ ರಾಜ್ಯದ 13 ಜಿಲ್ಲೆಗಳಿವೆ, ಕಲಬುರಗಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಬಳ್ಲಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್ ಚಿಕ್ಕಬಳ್ಳಾಪುರ, ಗದಗ, ಉತ್ತರ ಕನ್ನಡ, ತುಮಕೂರು ಜಿಲ್ಲೆಗಳು ಈ ಪಟ್ಟಿಯಲ್ಲಿವೆ. ಹಸಿರು ವಲಯದಲ್ಲಿ ರಾಮನಗರ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಿವೆ.
ರೆಡ್ ಹಾಗೂ ಆರೆಂಜ್ ಎರಡೂ ಪಟ್ಟಿಗಳಲ್ಲಿ ಇಲ್ಲದ ರಾಜ್ಯದ ಇತರೆ ಜಿಲ್ಲೆಗಳೆಲ್ಲವೂ ಹಸಿರು ವಲಯ ಪಟ್ಟಿಯಲ್ಲಿದ್ದು, ಮೇ.3 ಬಳಿಕ ಈ ಮೂರು ಪಟ್ಟಿಗಳಿಗೆ ಪ್ರತ್ಯೇಕ ಲಾಕ್'ಡೌನ್ ನಿಯಮಗಳು ಅನ್ವಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


