ದೇಶ

ಮಹಾಭಾರತ, ರಾಮಾಯಣ ಆಯ್ತು ಈಗ ಬರಲಿದೆ ಶಕ್ತಿಮಾನ್! 

ದೂರದರ್ಶನದಲ್ಲಿ ಮಹಾಭಾರತ, ರಾಮಾಯಣ ದಾರಾವಾಹಿಗಳ ಮರುಪ್ರಸಾರವಾಗುತ್ತಿದೆ, ಈ ಬೆನ್ನಲ್ಲೇ ದಶಕಗಳ ಹಿಂದಿನ ಮತ್ತೊಂದು ಜನಪ್ರಿಯ ಧಾರಾವಾಹಿ ಮರುಪ್ರಸಾರವಾಗಲಿದೆ.

ಮಹಾಭಾರತ, ರಾಮಾಯಣ ಆಯ್ತು ಈಗ ಬರಲಿದೆ ಶಕ್ತಿಮಾನ್! 
ಶಕ್ತಿಮಾನ್
Published On :

ದೂರದರ್ಶನದಲ್ಲಿ ಮಹಾಭಾರತ, ರಾಮಾಯಣ ದಾರಾವಾಹಿಗಳ ಮರುಪ್ರಸಾರವಾಗುತ್ತಿದೆ, ಈ ಬೆನ್ನಲ್ಲೇ ದಶಕಗಳ ಹಿಂದಿನ ಮತ್ತೊಂದು ಜನಪ್ರಿಯ ಧಾರಾವಾಹಿ ಮರುಪ್ರಸಾರವಾಗಲಿದೆ. 

ಹಿರಿಯ ನಟ ಮುಖೇಶ್ ಖನ್ನಾ ನಟಿಸಿರುವ ಶಕ್ತಿಮಾನ್ ಧಾರಾವಾಹಿ ಮರುಪ್ರಸಾರವಾಗಲಿದೆ. ಸ್ವತಃ ಮುಖೇಶ್ ಖನ್ನಾ ಈ ಬಗ್ಗೆ ಮಾಹಿತಿ ನೀಡಿ ಟ್ವೀಟರ್ ನಲ್ಲಿ ಹೇಳಿದ್ದಾರೆ. 

ರಾಮಾಯಣ, ಮಹಾಭಾರತದ ಜೊತೆ ಶಾರೂಖ್ ಖಾನ್ ನಟನೆಯ ಸರ್ಕಸ್ ಕೂಡ ದೂರದರ್ಶನದಲ್ಲಿ ಮರುಪ್ರಸಾರವಾಗಲಿದೆ. ರಾಮಾಯಣ, ಮಹಾಭಾರತ ಒಂದೇ ದಿನ ನೋಡುವುದಕ್ಕೆ ಸಾಧ್ಯವಾಗುವುದು ಲಾಕ್ ಡೌನ್ ನಲ್ಲಿರುವ 135 ಕೋಟಿ ಭಾರತೀಯರಿಗೆ ಅತ್ಯಂತ ಸಂತಸದ ವಿಷಯ, ಇದರ ಜೊತೆಗೆ ಮತ್ತೊಂದು ಸಂತಸದ ಸುದ್ದಿಯೆಂದರೆ ಅದು ಶಕ್ತಿಮಾನ್ ಕೂಡ ಶೀಘ್ರವೇ ಮರುಪ್ರಸಾರವಾಗಲಿದೆ ಎಂದು ವಿಡಿಯೋ ಸಂದೇಶದಲ್ಲಿ ಮುಖೇಶ್ ಖನ್ನಾ ಹೇಳಿದ್ದಾರೆ. ಆದರೆ ದಿನಾಂಕ ಮತ್ತು ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. 1990 ರ ದಶಕದಲ್ಲಿ ಶಕ್ತಿಮಾನ್ ಜನಪ್ರಿಯ ಧಾರಾವಾಹಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.