ದೇಶ

ಲಾಕ್ ಡೌನ್: 'ಸುವರ್ಣ ಯುಗ' ಮರಳಿ ತರಲು ಡಿಡಿ ಯೋಜನೆ: ಬರಲಿದೆ ಚಾಣಕ್ಯ, ಉಪನಿಷದ್ ಗಂಗಾ! 

ಕಳೆದ ಎರಡುವರೆ ದಶಕಗಳ ಹಿಂದೆ ಸಾರವಾದ ಧಾರಾವಾಹಿಗಳನ್ನು ಡಿಡಿ ಲಾಕ್ ಡೌನ್ ಅವಧಿಯಲ್ಲಿ ಪ್ರಸಾರ ಮಾಡಲಿದ್ದು, ಜನರನ್ನು ಹಿಡಿದಿಟ್ಟುಕೊಳ್ಳಲು ಯೋಜನೆ ಮಾಡಿಕೊಂಡಿದೆ.

ಲಾಕ್ ಡೌನ್: 'ಸುವರ್ಣ ಯುಗ' ಮರಳಿ ತರಲು ಡಿಡಿ ಯೋಜನೆ: ಬರಲಿದೆ ಚಾಣಕ್ಯ, ಉಪನಿಷದ್ ಗಂಗಾ! 
ಚಾಣಕ್ಯ
Published On :

ನವದೆಹಲಿ: ಕಳೆದ ಎರಡುವರೆ ದಶಕಗಳ ಹಿಂದೆ ದೂರದರ್ಶನನಲ್ಲಿ ಧಾರಾವಾಹಿಗಳು ಅಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲವಾಗಿದ್ದವು. ಆಯಾ ವಯೋಮಿತಿಗೆ ತಕ್ಕಂತಹ ಮನೋರಂಜನೆಗಳನ್ನು ನೀಡುತ್ತಿತ್ತು. ಈ ಸುವರ್ಣಯುಗದಲ್ಲಿ ಪ್ರಸಾರವಾದ ಧಾರಾವಾಹಿಗಳನ್ನು ಡಿಡಿ ಲಾಕ್ ಡೌನ್ ಅವಧಿಯಲ್ಲಿ ಪ್ರಸಾರ ಮಾಡಲಿದ್ದು, ಜನರನ್ನು ಹಿಡಿದಿಟ್ಟುಕೊಳ್ಳಲು ಯೋಜನೆ ಮಾಡಿಕೊಂಡಿದೆ.

ಚಂದ್ರಪ್ರಕಾಶ್ ದ್ವಿವೇದಿ ಅವರ ನಿರ್ದೇಶನದ “ಚಾಣಾಕ್ಯ” ಧಾರಾವಾಹಿ ಡಿಡಿ ಭಾರತಿ ವಾಹಿನಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಮಧ್ಯಾಹ್ನಾ ಆರಂಭವಾಗುವ ಸಾಧ್ಯತೆ ಇದೆ. ಇದಲ್ಲದೆ  ಚಿನ್ಮಯ್ ಮಿಷನ್ ಟ್ರಸ್ಟ್‍ ನಿರ್ಮಾಣದಲ್ಲಿ ಚಂದ್ರಪ್ರಕಾಶ್ ಅವರದ್ದೇ ನಿರ್ದೇಶನದ “ಉಪನಿಷದ್ ಗಂಗಾ” ಧಾರಾವಾಹಿಯನ್ನು ಸಹ ಮಧ್ಯಾಹ್ನದ ವೇಳೆಯಲ್ಲಿ ಡಿಡಿ ಭಾರತಿಯಲ್ಲಿ ಪ್ರಸಾರ ಮಾಡಲು ಸಿದ್ಧತೆಗಳು ನಡೆದಿವೆ. ಅಲ್ಲದೆ ಈ ಎರಡು ಧಾರಾವಾಹಿಗಳು ಪ್ರತಿದಿನ ಒಂದು ಗಂಟೆ ಪ್ರಸಾರವಾಗಲಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.