ದೇಶ

ಎಣ್ಣೆ ಬೇಕು ಅಣ್ಣ: ಕುಡುಕರ ಆತ್ಮಹತ್ಯೆ ಹೆಚ್ಚಳ ಹಿನ್ನೆಲೆ ಮದ್ಯ ಸರಬರಾಜಿಗೆ ಸರ್ಕಾರ ಆದೇಶ!

ಕೊರೋನಾ ವೈರಸ್ ಹರಡದಂತೆ ಕೇಂದ್ರ ಸರ್ಕಾರ 21 ದಿನಗಳ ಲಾಕ್ ಡೌನ್ ಗೆ ಆದೇಶಿಸಿದ್ದು ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿದೆ. ಆದರೆ ಮದ್ಯಕ್ಕೆ ದಾಸರಾಗಿರುವವರು ಮಾತ್ರ ತಮಗೆ ಮದ್ಯ ಬೇಕೇ ಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಎಣ್ಣೆ ಬೇಕು ಅಣ್ಣ: ಕುಡುಕರ ಆತ್ಮಹತ್ಯೆ ಹೆಚ್ಚಳ ಹಿನ್ನೆಲೆ ಮದ್ಯ ಸರಬರಾಜಿಗೆ ಸರ್ಕಾರ ಆದೇಶ!
ಸಂಗ್ರಹ ಚಿತ್ರ
Published On :

ಕೊಚ್ಚಿ: ಕೊರೋನಾ ವೈರಸ್ ಹರಡದಂತೆ ಕೇಂದ್ರ ಸರ್ಕಾರ 21 ದಿನಗಳ ಲಾಕ್ ಡೌನ್ ಗೆ ಆದೇಶಿಸಿದ್ದು ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿದೆ. ಆದರೆ ಮದ್ಯಕ್ಕೆ ದಾಸರಾಗಿರುವವರು ಮಾತ್ರ ತಮಗೆ ಮದ್ಯ ಬೇಕೇ ಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರ ಇದೀಗ ಎಚ್ಚೇತ್ತಿದೆ. 

ತಮಗೆ ಮದ್ಯ ಬೇಕು ಎಂದು ಹಲವರು ವಿಡಿಯೋ ಮಾಡಿ ಕಳುಹಿಸುತ್ತಿದ್ದಾರೆ. ಇದರ ಜೊತೆಗೆ ಮದ್ಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಸಹ ಹಾಕುತ್ತಿದ್ದಾರೆ. ಇನ್ನು ಕುಡುಕರ ಆತ್ಮಹತ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ಕೇರಳ ಸರ್ಕಾರ ಮದ್ಯ ಸರಬರಾಜಿಗೆ ಆದೇಶಿಸಿದೆ. 

ಆನ್ ಲೈನ್ ಮೂಲಕ ಮದ್ಯ ಸರಬರಾಜಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇನ್ನು ಕರ್ನಾಟಕ ರಾಜ್ಯದಲ್ಲೂ ಮದ್ಯ ಮಾರಾಟಕ್ಕೆ ಆಗ್ರಹಿಸಿ 5ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.