ಲಾಕ್ ಡೌನ್ ನಡುವೆ ತನ್ನವಳ ಜತೆ ವಿವಾಹವಾಗಲು ಬೈಕಿನಲ್ಲಿ ಆಗಮಿಸಿದ ವರ!
ಮದುವೆಗಾಗಿ ವಿಶೇಷ ಬಾಸಿಂಗ, ಪೇಟಾ ಸೇರಿ ಅಲಂಕಾರಿಕ ವಸ್ತ್ರ ಧರಿಸಿದ್ದ ವರನೊಬ್ಬ ಮೋಟಾರುಬೈಕನ್ನೇರಿ ತಾನು ಮದುವೆಯಾಗಲಿರುವ ವಧುವಿನ ಮನೆಗೆ ತೆರಳಿ ಅವಳನ್ನು ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊರೋನಾವೈರಸ್ ಕಾರಣ ಭಾರತ ಲಾಕ್ ಡೌನ್ ಆಗಿರುವ ಈ ದಿನಗಳಲ್ಲಿ ಮದುವೆಯಂತಹಾ ಶುಭ ಸಮಾರಂಭಗಳು ನಡೆಯುವುದು ಕಠಿಣವಾಗಿದೆ.

ಬಿಜ್ನೂರ್(ಉತ್ತರ ಪ್ರದೇಶ): ಮದುವೆಗಾಗಿ ವಿಶೇಷ ಬಾಸಿಂಗ, ಪೇಟಾ ಸೇರಿ ಅಲಂಕಾರಿಕ ವಸ್ತ್ರ ಧರಿಸಿದ್ದ ವರನೊಬ್ಬ ಮೋಟಾರುಬೈಕನ್ನೇರಿ ತಾನು ಮದುವೆಯಾಗಲಿರುವ ವಧುವಿನ ಮನೆಗೆ ತೆರಳಿ ಅವಳನ್ನು ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊರೋನಾವೈರಸ್ ಕಾರಣ ಭಾರತ ಲಾಕ್ ಡೌನ್ ಆಗಿರುವ ಈ ದಿನಗಳಲ್ಲಿ ಮದುವೆಯಂತಹಾ ಶುಭ ಸಮಾರಂಭಗಳು ನಡೆಯುವುದು ಕಠಿಣವಾಗಿದೆ.
ತನ್ನ ದ್ವಿಚಕ್ರ ವಾಹನದಲ್ಲಿ ಮದುಮಗ ಹಾಗೂ ಆತನ ಹಿಂದೆ ಆತನ ತಂದೆ, ಹಾಗೂ ಇಬ್ಬರು ಸ್ನೇಹಿತರು ವಧುವಿನ ಮನೆಗೆ ತೆರಳಿದ್ದಾರೆ. ಅಲ್ಲಿ ಮದುವೆ ಕಾರ್ಯಕ್ರಮ ನಡೆದು ಮದುಮಗಳ ಸಮೇತ ಹಿಂತಿರುಗಿದ್ದಾರೆ.
ಕೊರೋನಾ ಭೀತಿಯ ನಡುವೆ ನಡೆದ ಈ ವಿವಾಹವು ಜತನ್ ಮೊಹಲ್ಲಾ ನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿಎ.
ಕೊಟ್ವಾಲಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನಸೀರ್ಪುರ ಗ್ರಾಮದ ವರ ವಿಕಾಸ್ ಕುಮಾರ್ (22) ಕಳೆದ 18 ತಿಂಗಳಿನಿಂದ ತನ್ನ ಮದುವೆಗೆ ಸಿದ್ದವಾಗಿ ಕಾಯುತ್ತಿದ್ದ. ವಿಕಾಸ್ ತನ್ನ ವಿವಾಹ ವಿಜ್ರಂಭಣೆಯಿಂದ ನಡೆಯಬೇಕೆಂದು ಬಯಸಿದ್ದ ಮತ್ತು ಅದಕ್ಕೆ ತಕ್ಕ ತಯಾರಿ ಕೂಡ ನಡೆದಿತ್ತು,ಹಾಗಿದ್ದರೂ ಕೊರೋನಾ ಹಾವಳಿ ಕಾರಣ ದೇಶವ್ಯಾಪಿ ಲಾಕ್ ಡೌನ್ ಆಗಿ ಅವರ ಯೋಜನೆಗಳು ತಲೆಕೆಳಗಾಗಿದೆ. ಆದರೆ ವಿಕಾಸ್ ಗೆ ಮದುವೆಯನ್ನು ಮುಂದೂಡಲು ಇಷ್ಟವಿರಲಿಲ್ಲ.
ಮದುವೆಯಲ್ಲಿ ಬಾಗವಹಿಸಿದ ವಧು-ವರ ಸೇರಿದಂತೆ ಎಲ್ಲರೂ ಮಾಸ್ಕ್ ಹಾಗೂ ಸ್ಯಾನಿಟ್ರೇಜರ್ ಗಳನ್ನು ಬಳಸಿದ್ದಾರೆ."ಭವ್ಯವಾದ ವಿವಾಹ ನಡೆಯಬೇಕೆಂದು ನಾನು ಕನಸು ಕಂಡಿದ್ದೆ. ಆದರೆ ಈ ಸಮಯದಲ್ಲಿ ನಾವು ಮದುವೆಯಾಗಿದ್ದು ನನಗಿನ್ನೂ ಸಂತಸ ತಂದಿದೆ. ಲಾಕ್ ಡೌನ್ ತೆಗೆದುಹಾಕಿದ ನಂತರ, ನಾವು ಸಂಭ್ರಮ ಆಚರಿಸಿಕೊಳ್ಳುತ್ತೇವೆ" ಅವರು ಸ್ಥಳೀಯ ವರದಿಗಾರರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


