ಕೊರೋನಾ: ಐಸೊಲೇಷನ್ ವಾರ್ಡ್‌ನಿಂದ ಓಡಿಹೋಗಿದ್ದ ಕೇರಳದ ಪೋಲೀಸ್ ಅಧಿಕಾರಿ ಕೆಲಸವೇ ಹೋಯ್ತು
ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಿಂದ ಪರಾರಿಯಾಗಿ ಎರಡು ದಿನಗಳ ನಂತರ ಸಶಸ್ತ್ರ ಮೀಸಲು ಪೊಲೀಸ್ ಶಿಬಿರದಲ್ಲಿ ಕಾಣಿಸಿಕೊಂಡ ಕೇರಳದ ಒಬ್ಬ ಪೋಲೀಸರನ್ನು ಸೇವೆಯಿಂದ ತೆಗೆದುಹಾಕಲಾಗಿದೆ.

ತಿರುವನಂತಪುರಂ: ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಿಂದ ಪರಾರಿಯಾಗಿ ಎರಡು ದಿನಗಳ ನಂತರ ಸಶಸ್ತ್ರ ಮೀಸಲು ಪೊಲೀಸ್ ಶಿಬಿರದಲ್ಲಿ ಕಾಣಿಸಿಕೊಂಡ ಕೇರಳದ ಒಬ್ಬ ಪೋಲೀಸರನ್ನು ಸೇವೆಯಿಂದ ತೆಗೆದುಹಾಕಲಾಗಿದೆ.
ತಿರುವನಂತಪುರಂನ ಅಂಬುರಿ ಮೂಲದ ಪೋಲೀಸ್ ಅಧಿಕಾರಿ ಇತ್ತೀಚೆಗೆ ಕೇರಳದ ಪಟನಂತಿಟ್ಟ ಜಿಲ್ಲೆಯ ರಣ್ಣಿ ಗ್ರಾಮಕ್ಕೆ ತೆರಳಿದ್ದರೆಂದು ತಿಳಿದು ಬಂದ ನಂತರ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು.ರಣ್ಣಿ ಗ್ರಾಮ್ದಲ್ಲಿ ಕೋವಿಡ್-19 ಮಾರಕ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ.
ಅಲ್ಲದೆ ಈ ಪೋಲೀಸ್ ಅಧಿಕಾರಿ ಸೋಂಕಿತರೊಡನೆ ನೇರ ಸಂಪರ್ಕದಲ್ಲಿದ್ದನೆಂದು ಸಾಬೀತಾಗಿದೆ. ಆದರೆ, ಆ ವ್ಯಕ್ತಿ ಕಡ್ಡಾಯವಾಗಿ 14 ದಿನಗಳ ಸಂವಹನ ನಿರ್ಬಂಧವನ್ನು ಉಲ್ಲಂಘಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದನು. ಅದಾಗಿ ಎರಡು ದಿನಗಳ ನಂತರ ವರು ಶಸ್ತ್ರ ಮೀಸಲು ಪೊಲೀಸ್ ಶಿಬಿರಕ್ಕೆ ತೆರಳಿದರು, ಅಲ್ಲಿ ಅವರು ಮೊದಲು ಕೆಲಸ ಮಾದ್ದರು. ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಅಲ್ಲಿಯೇ ಇದ್ದ ಪೋಲೀಸ್ ಅಧಿಕಾರಿ ತಾವು ಸೋಂಕಿತರೊಡನಿದ್ದು ಬಳಿಕ ಆಸ್ಪತ್ರೆಯಿಂದ ಪರಾರಿಯಾಗಿದ್ದ ವಿಚಾರವನ್ನು ಮರೆ ಮಾಚಿದ್ದಾರೆ.
ಆ ವ್ಯಕ್ತಿ ಪೊಲೀಸ್ ಕ್ಯಾಂಟೀನ್‌ಗೆ ಹೋಗಿದ್ದನು, ಅಲ್ಲಿ ಪ್ರತಿದಿನ ಡಜನ್ ಗಟ್ಟಲೆ ಜನ ಸೇರುತ್ತಾರೆ.ಇದೀಗ ಇತರ ಪೊಲೀಸರ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ ಎಂದು ಮೂಲಗಳು ತಿಳಿಸಿವೆ.
"ನಾವು ಸಂಪೂರ್ಣ ಆವರಣವನ್ನು ಸ್ವಚ್ಚಗೊಳಿಸಲು ಪ್ರಾರಂಭಿಸಿದ್ದೇವೆ. ಅವರು ಯಾರೊಂದಿಗೂ ವೈಯಕ್ತಿಕವಾಗಿ ಸಂವಹನ ನಡೆಸಿದ್ದಾರೆಯೇ ಎಂದು ಪರೀಕ್ಷಿಸಲು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸಶಸ್ತ್ರ ಮೀಸಲು ಶಿಬಿರದಲ್ಲಿ 1100 ಕ್ಕೂ ಹೆಚ್ಚು ಪೊಲೀಸರು ನೆಲೆಸಿದ್ದಾರೆ ಮತ್ತು ಅವರಲ್ಲಿ ಸೋಂಕಿನ ಹರಡುವಿಕೆಯು ಸಾರ್ವಜನಿಕರೊಂದಿಗೆ ನಿಯಮಿತವಾಗಿ ಸಂವಹನ ನಡೆಸುವುದರಿಂದ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.
ಬುಧವಾರ ರಾತ್ರಿಯ ವೇಳೆಗೆ ಆತನ ಪರೀಕ್ಷಾ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ."ಅವರ ವರದಿಯನ್ನು ಪಡೆದ ನಂತರ ನಾವು ಮುಂದಿನ ಕ್ರಮವನ್ನು ಯೋಜಿಸುತ್ತೇವೆ" ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


