ಕೊರೋನಾ ಎಫೆಕ್ಟ್: 10 ರೂ. ಇದ್ದ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ 50 ರೂ.ಗೆ ಏರಿಕೆ!
ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಜನ ಸಂದಣಿ ಕಡಿಮೆ ಮಾಡುವುದಕ್ಕಾಗಿ ರೈಲ್ವೆ ಇಲಾಖೆ 10 ರೂಪಾಯಿ ಇದ್ದ ಪ್ಲಾಟ್ ಟಿಕೆಟ್ ದರವನ್ನು 50 ರೂಪಾಯಿಗೆ ಹೆಚ್ಚಳ ಮಾಡಿದೆ.

ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಜನ ಸಂದಣಿ ಕಡಿಮೆ ಮಾಡುವುದಕ್ಕಾಗಿ ರೈಲ್ವೆ ಇಲಾಖೆ 10 ರೂಪಾಯಿ ಇದ್ದ ಪ್ಲಾಟ್ ಟಿಕೆಟ್ ದರವನ್ನು 50 ರೂಪಾಯಿಗೆ ಹೆಚ್ಚಳ ಮಾಡಿದೆ.
ಆರು ರೈಲ್ವೆ ವಲಯಗಳಲ್ಲಿ ಮಾತ್ರ ಪ್ಲಾಟ್ ಫಾರಂ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಪಶ್ಚಿಮ ರೈಲ್ವೆ, ಮುಂಬೈ, ವಡೋದ್ರಾ, ಅಹಮದಾಬಾದ್, ರತ್ನಂ, ರಾಜ್ಕೋಟ್, ಭಾವನಗರ ರೈಲ್ವೆ ವಲಯದ ಸುಮಾರು 250 ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಜೊತೆಗೆ ನಿಲ್ದಾಣಕ್ಕೆ ಬರುವ ಜನರಿಗೆ ನೀಡಲಾಗುವ ಪ್ಲಾಟ್ ಫಾರಂ ಟಿಕೆಟ್ ದರದಲ್ಲಿ ಗಣನೀಯ ಏರಿಕೆ ಮಾಡಲಾಗಿದೆ.
ಪ್ರಯಾಣಿಕರನ್ನು ಹೊರತುಪಡಿಸಿ ಇತರರು ರೈಲು ನಿಲ್ದಾಣಕ್ಕೆ ಬಾರದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ ಹವಾ ನಿಯಂತ್ರಿತ ರೈಲುಗಳಲ್ಲಿ ಕಿಟಕಿ ಪರದೆ ಹಾಗೂ ಬೆಡ್ಶೀಟ್ಗಳನ್ನು ತೆಗೆದುಹಾಕಲು ಮತ್ತು ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಡುಗೆ ತಯಾರಿಸುವವರಲ್ಲಿ ಜ್ವರ, ಕೆಮ್ಮು, ನೆಗಡಿ ಇದ್ದರೆ ಅಂತಹ ಸಿಬ್ಬಂದಿ ಅಡುಗೆ ಮಾಡುವ ಕೆಲಸದಲ್ಲಿ ಭಾಗಿಯಾಗಬಾರದು ಎಂದು ರೈಲ್ವೆ ಇಲಾಖೆಯ ಹಾಗೂ ಅದರ ಅಡುಗೆ ವಿಭಾಗ ಐಆರ್ಸಿಟಿಸಿಗೆ ಸಲಹೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


