ದೇಶ

ಡೆಹ್ರಾಡೂನ್: ’ನಿಮ್ಮಲ್ಲಿ ದೇವರನ್ನು ಕಂಡೆ’ ಮಹಿಳೆಯ ಭಾವುಕ ಮಾತಿಗೆ ಕಣ್ಣೀರಾದ ಪ್ರಧಾನಿ ಮೋದಿ

ಮಹಿಳೆಯ ಮಾತು ಕೇಳಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರಿಟ್ಟ ಅಪರೂಪದ ಘಟನೆಗೆ ಉತ್ತರಾಖಂಡ್ ನಲ್ಲಿ ನಡೆದ ಭಾರತೀಯ ಜನೌಷಧಿ ಪರಿಯೋಜನಾ ಫಲಾನುಭವಿಗಳೊಂದಿಗೆ ಮಾ.07 ರಂದು ನಡೆದ ಸಂವಾದದ ಕಾರ್ಯಕ್ರಮ ಸಾಕ್ಷಿಯಾಯಿತು.

ಡೆಹ್ರಾಡೂನ್: ’ನಿಮ್ಮಲ್ಲಿ ದೇವರನ್ನು ಕಂಡೆ’ ಮಹಿಳೆಯ ಭಾವುಕ ಮಾತಿಗೆ ಕಣ್ಣೀರಾದ ಪ್ರಧಾನಿ ಮೋದಿ
ಡೆಹ್ರಾಡೂನ್: ’ನಿಮ್ಮಲ್ಲಿ ದೇವರನ್ನು ಕಂಡೆ’ ಮಹಿಳೆಯ ಭಾವುಕ ಮಾತಿಗೆ ಕಣ್ಣೀರಾದ ಪ್ರಧಾನಿ ಮೋದಿ
Published On :

ಡೆಹ್ರಾಡೂನ್: ಮಹಿಳೆಯ ಮಾತು ಕೇಳಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರಿಟ್ಟ ಅಪರೂಪದ ಘಟನೆಗೆ ಉತ್ತರಾಖಂಡ್ ನಲ್ಲಿ ನಡೆದ ಭಾರತೀಯ ಜನೌಷಧಿ ಪರಿಯೋಜನಾ ಫಲಾನುಭವಿಗಳೊಂದಿಗೆ ಮಾ.07 ರಂದು ನಡೆದ ಸಂವಾದದ ಕಾರ್ಯಕ್ರಮ ಸಾಕ್ಷಿಯಾಯಿತು. 

ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ಜನೌಷಧಿ ಪರಿಯೋಜನಾ ಫಲಾನುಭವಿ ಮಹಿಳೆ, ದುಬಾರಿ ಮೊತ್ತದ ಔಷಧಿಗಳು ಸರ್ಕಾರದಿಂದ ಅಗ್ಗದ ದರದಲ್ಲಿ ಲಭ್ಯವಾಗುತ್ತಿರುವುದರಿಂದ ತಮಗೆ ಅತ್ಯಂತ ಉಪಯೋಗಕಾರಿಯಾಗಿದೆ. ನಾನು ದೇವರನ್ನು ನೋಡಿಲ್ಲ, ಮೋದಿ ಜೀ ಆದರೆ ನಿಮ್ಮನ್ನು ದೇವರ ರೂಪದಲ್ಲಿ ನೋಡುತ್ತಿದ್ದೇನೆ ನಿಮಗೆ ನನ್ನ ಧನ್ಯವಾದಗಳು ಎಂದು ಮಹಿಳೆ ಹೇಳಿದರು ಎಂದು ಭಾವುಕರಾಗಿ ನುಡಿದರು. ಈ ಮಾತು ಕೇಳುತ್ತಿದ್ದಂತೆಯೇ ಪ್ರಧಾನಿ ಮೋದಿ ಸಹ ಭಾವುಕರಾಗಿ ಕಣ್ಣೀರಾದರು. 

ಮಹಿಳೆಯ ಮಾತಿಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಆರೋಗ್ಯ ಸಮಸ್ಯೆಯನ್ನು ಎದುರಿಸಿ ಅದರಿಂದ ಹೊರಬಂದಿರುವ ನಿಮ್ಮ ಇಚ್ಛಾಶಕ್ತಿಯೇ ಎಲ್ಲಕ್ಕಿಂತ ಮಿಗಿಲಾದ ದೇವರು, ನಿಮ್ಮ ಆತ್ಮವಿಶ್ವಾಸ ಹೀಗೆಯೇ ಇರಬೇಕೆಂದು ಹೇಳಿದರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.