ಬಾಬ್ರಿ ಮಸೀದಿ ಧ್ವಂಸ ಪ್ರಕರಣ; ಸಿಬಿಐ ವಿಶೇಷ ಕೋರ್ಟ್ ನಿಂದ ತ್ವರಿತಗತಿಯ ವಿಚಾರಣೆ
ರಾಮಜನ್ಮ ಭೂಮಿ ನಿವೇಶನ ವಿವಾದವನ್ನು ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್ ಆಯೋಧ್ಯೆ ರಾಮ ಮಂದಿರ ಪರವಾಗಿ ತೀರ್ಪು ಪ್ರಕಟಿಸಿದ ನಂತರ, ಈಗ ಎಲ್ಲರ ಕಣ್ಣು ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸಂಬಂಧ ತ್ವರಿತ ವಿಚಾರಣೆಯ ಮೇಲೆ ನೆಟ್ಟಿದೆ.

ಲಕ್ನೋ: ರಾಮಜನ್ಮ ಭೂಮಿ ನಿವೇಶನ ವಿವಾದವನ್ನು ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್ ಆಯೋಧ್ಯೆ ರಾಮ ಮಂದಿರ ಪರವಾಗಿ ತೀರ್ಪು ಪ್ರಕಟಿಸಿದ ನಂತರ, ಈಗ ಎಲ್ಲರ ಕಣ್ಣು ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸಂಬಂಧ ತ್ವರಿತ ವಿಚಾರಣೆಯ ಮೇಲೆ ನೆಟ್ಟಿದೆ.
ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆಯ ನಂತರ ಪ್ರಕರಣವನ್ನು ಸಿಬಿಐ ವಿಶೇಷ ನ್ಯಾಯಾಲಯ ಕೈಗೆತ್ತಿಕೊಂಡಿದ್ದು, ಪ್ರಕರಣದ 294ನೇ ಸಾಕ್ಷಿಯಾಗಿರುವ ಎಂ. ನಾರಾಯಣನ್ ಶುಕ್ರವಾರ ಹೇಳಿಕೆ ದಾಖಲಿಸಲು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಈ ಪ್ರಕರಣದಲ್ಲಿ ಸಿಬಿಐ ಪರವಾಗಿ ನಾರಾಯಣನ್ ಕೊನೆಯ ಸಾಕ್ಷಿಯಾಗಿದ್ದಾರೆ. ಈ ಪ್ರಕರಣವನ್ನು 1992, ಡಿಸೆಂಬರ್6, ರಂದು ರಾಮಜನ್ಮಭೂಮಿ ಪೊಲೀಸ್ ಠಾಣೆಯ ಠಾಣಾಧಿಕಾರಿ, ರಾಮಜನ್ಮಭೂಮಿ ಚೌಕಿ ಉಸ್ತುವಾರಿ ದಾಖಲಿಸಿದ್ದರು.
ಸಿ ಆರ್ ಪಿ ಸಿ ಸೆಕ್ಷನ್ 313ರಡಿ 33 ಆರೋಪಿಗಳ ಹೇಳಿಕೆಯನ್ನು ವಿಶೇಷ ಸಿಬಿಐ ನ್ಯಾಯಧೀಶ ಎಸ್.ಕೆ.ಯಾದವ್ ದಾಖಲಿಸಿಕೊಳ್ಳುವುದನ್ನು ಆರಂಭಿಸಿದ್ದಾರೆ.
ಮಸೀದಿ ದ್ವಂಸ ಸಂಬಂಧ ದಾಖಲಾಗಿದ್ದ ಒಟ್ಟು 48ಎಫ್ ಐ ಆರ್ ಗಳ ಬಗ್ಗೆ ತನಿಖೆ ನಡೆಸಿದ ಸಿಬಿ- ಸಿಐಡಿ ನಂತರ ಅದನ್ನು ಸಿಬಿಐಗೆ ಹಸ್ತಾಂತರಿಸಿತ್ತು. ನಂತರ ಮೇ 31, 2017ರ ಮೇ ತಿಂಗಳಲ್ಲಿ ಸಿಬಿಐ 49 ಮಂದಿಯ ವಿರುದ್ದ ದೋಷಾರೋಪಪಟ್ಟಿ ಸಲ್ಲಿಸಿತ್ತು ಈ ಪೈಕಿ 16 ಮಂದಿ ಮೃತಪಟ್ಟಿದ್ದಾರೆ. ಪ್ರಕರಣದ ತೀರ್ಪನ್ನು ಒಂಬತ್ತು ತಿಂಗಳೊಳಗೆ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ತಾಕೀತು ಮಾಡಿರುವ ಹಿನ್ನಲೆಯಲ್ಲಿ ನ್ಯಾಯಾಲಯ 2020ರ ಅಂತ್ಯದ ವೇಳೆಗೆ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


