ಸೋಷಿಯಲ್ ಮೀಡಿಯಾದಿಂದ ಹೊರಬರುತ್ತೇನೆಂದು ಶಾಕ್ ಕೊಟ್ಟ ಪ್ರಧಾನಿ: ಮೋದಿ ಪ್ರೊಫೈಲ್ ಫೋಟೋ ಹಾಕಿದ್ದ ಝುಕರ್ ಬರ್ಗ್!
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಜಕಾರಣಿಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖರು. ಅವರು ಒಂದು ಟ್ವೀಟ್, ಸ್ಟೇಟಸ್, ವಿಡಿಯೊ ಹಾಕಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೈರಲ್ ಆಗುತ್ತದೆ.

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಜಕಾರಣಿಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖರು. ಅವರು ಒಂದು ಟ್ವೀಟ್, ಸ್ಟೇಟಸ್, ವಿಡಿಯೊ ಹಾಕಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ಕೋಟ್ಯಂತರ ಅನುಯಾಯಿಗಳು ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ದೇಶ-ವಿದೇಶಗಳಲ್ಲಿ ಇದ್ದಾರೆ. ಇಂತವರು ನಿನ್ನೆ ಒಂದು ಬಾಂಬ್ ಹಾಕಿದ ರೀತಿಯ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿಯೇ ಹಾಕಿದರು. ಅದು ನಾನು ಭಾನುವಾರದಿಂದ ಸೋಷಿಯಲ್ ಮೀಡಿಯಾದಿಂದ ಹೊರಬರುತ್ತಿದ್ದೇನೆ ಎಂದು.
ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಒಮ್ಮೆ ಪ್ರಧಾನಿ ಮೋದಿಯವರನ್ನು ತಮ್ಮ ಕಂಪೆನಿಯ ಕೇಂದ್ರ ಕಚೇರಿಗೆ ಕರೆದು ಆತಿಥ್ಯ ಮಾಡಿದ್ದಲ್ಲದೆ ಮೋದಿಯವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ತಮ್ಮ ಪ್ರೊಫೈಲ್ ಫೋಟೋವನ್ನು ಬದಲಾಯಿಸಿಕೊಂಡಿದ್ದರು. ಅದು 2015ರ ಸೆಪ್ಟೆಂಬರ್ ತಿಂಗಳು, ಮಾರ್ಕ್ ಝುಕರ್ ಬರ್ಗ್ ಅವರು ಮೋದಿಯವರನ್ನು ಅಮೆರಿಕದ ತಮ್ಮ ಕ್ಯಾಲಿಫೋರ್ನಿಯಾದಲ್ಲಿರುವ ಫೇಸ್ ಬುಕ್ ಕೇಂದ್ರ ಕಚೇರಿಗೆ ಕರೆದು ಅಲ್ಲಿ ವಿಶೇಷ ಸಭೆ ನಡೆಸಿದ್ದರು.
ಮೋದಿಯವರ ಜೊತೆ ಸಂವಾದ ನಡೆಸಿದ ಕೆಲವೇ ನಿಮಿಷಗಳಲ್ಲಿ ಮಾರ್ಕ್ ಝುಕರ್ ಬರ್ಗ್ ತಮ್ಮ ಪ್ರೊಫೈಲ್ ಫೋಟೋವನ್ನು ಬದಲಿಸಿ ತಮ್ಮ ಮತ್ತು ಮೋದಿಯವರ ಫೋಟೋ ಹಾಕಿ ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ನಮ್ಮ ಬೆಂಬಲವಿದೆ ಎಂದು ಬರೆದಿದ್ದರು. ಪ್ರೊಫೈಲ್ ಫೋಟೋದ ಬದಿಗೆ ಭಾರತದ ತ್ರಿವರ್ಣ ಧ್ವಜದ ಬಣ್ಣಗಳಿದ್ದವು. ಈ ಸಂದರ್ಭದಲ್ಲಿ ಮೋದಿಯವರು ಕೂಡ ಫೇಸ್ ಬುಕ್ ನಲ್ಲಿ ಪ್ರೊಫೈಲ್ ಫೋಟೋ ಬದಲಿಸಿಕೊಂಡರು. ಅವರ ಸೋಷಿಯಲ್ ಮೀಡಿಯಾ ಮೇಲಿನ ಒಲವನ್ನು ಬಹಿರಂಗಪಡಿಸಿದ್ದರು. ನಾನು ಅಷ್ಟೊಂದು ವಿದ್ಯಾವಂತನಲ್ಲ, ನನ್ನ ಸುತ್ತ ಕೆಲವು ಶಬ್ದಗಳು ಮಾತ್ರ ಸುತ್ತುತ್ತಿದ್ದವು. ಸೋಷಿಯಲ್ ಮೀಡಿಯಾ ನನ್ನಲ್ಲಿನ ಅಂತರವನ್ನು ಕಡಿಮೆ ಮಾಡಿದೆ ಎಂದು ಆ ಸಮಯದಲ್ಲಿ ಮೋದಿ ಹೇಳಿದ್ದರು.
ಹೀಗಿರುವ ಮೋದಿಯವರು ಸೋಷಿಯಲ್ ಮೀಡಿಯಾಗಳಿಂದ ಹೊರಬರುತ್ತೇನೆ ಎಂದು ಹೇಳಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮೋದಿಯವರು ಏನೋ ಇದರಲ್ಲಿ ಟ್ವಿಸ್ಟ್ ಕೊಡಲಿದ್ದಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


