ಕಪಿಲ್ ಮಿಶ್ರಾಗೆ 'ವೈ'ದರ್ಜೆಯ ಭದ್ರತೆ; ಜೈಲಿನಲ್ಲಿರಬೇಕಾದವರಿಗೆ ಬಿಜೆಪಿಯಿಂದ ರಕ್ಷಣೆ ಎಂದು ಕಾಂಗ್ರೆಸ್ ಆರೋಪ
ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾರಣರಾದವರು ಎಂದು ಆರೋಪಿಸಲ್ಪಟ್ಟ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರಿಗೆ 24*7 ಗಂಟೆಗಳ ವೈ ದರ್ಜೆಯ ಭದ್ರತೆ ನೀಡಲಾಗಿದೆ. ಕಪಿಲ್ ಮಿಶ್ರಾ ಅವರ ಜೀವಕ್ಕೆ ಅಪಾಯವಿದೆ ಎಂದು ಮನಗಂಡು ಅವರಿಗೆ ವೈ ದರ್ಜೆಯ ಭದ್ರತೆ ನೀಡಲಾಗಿದೆ. 6 ಮಂದಿ ಭದ್ರತಾ ಸಿಬ್ಬಂದಿ ಅವರನ್ನು ಹಗಲು ರಾತ್ರಿ ಕಾಯಲಿದ್ದಾರೆ.

ನವದೆಹಲಿ; ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾರಣರಾದವರು ಎಂದು ಆರೋಪಿಸಲ್ಪಟ್ಟ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರಿಗೆ 24*7 ಗಂಟೆಗಳ ವೈ ದರ್ಜೆಯ ಭದ್ರತೆ ನೀಡಲಾಗಿದೆ. ಕಪಿಲ್ ಮಿಶ್ರಾ ಅವರ ಜೀವಕ್ಕೆ ಅಪಾಯವಿದೆ ಎಂದು ಮನಗಂಡು ಅವರಿಗೆ ವೈ ದರ್ಜೆಯ ಭದ್ರತೆ ನೀಡಲಾಗಿದೆ. 6 ಮಂದಿ ಭದ್ರತಾ ಸಿಬ್ಬಂದಿ ಅವರನ್ನು ಹಗಲು ರಾತ್ರಿ ಕಾಯಲಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ಮೊದಲು ಕೋಮು ಗಲಭೆ ಸೃಷ್ಟಿಗೆ ಕಪಿಲ್ ಮಿಶ್ರಾ ಅವರ ಹೇಳಿಕೆಗಳೇ ಕಾರಣ, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೆದರಿಕೆಗಳು ಬರುತ್ತಿರುವುದರಿಂದ ತಮಗೆ ಭದ್ರತೆ ಒದಗಿಸಬೇಕೆಂದು ಕಪಿಲ್ ಮಿಶ್ರಾ ಕೇಳಿಕೊಂಡಿದ್ದರು.
ಇವರಿಗೆ ನೀಡಿರುವ ಭದ್ರತೆ ಬಗ್ಗೆ ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ಲ್ ಪ್ರತಿಕ್ರಿಯಿಸಿ, ಮಿಶ್ರಾ ಅವರನ್ನು ಬಂಧಿಸುವ ಬದಲು ಬಿಜೆಪಿ ದ್ವೇಷ ಹರಡುವವರನ್ನು ರಕ್ಷಿಸುತ್ತಿದೆ. ಕಪಿಲ್ ಮಿಶ್ರಾ ಅವರನ್ನು ಬಂಧಿಸುವ ಬದಲು ವೈ ದರ್ಜೆಯ ಭದ್ರತೆ ನೀಡುತ್ತಿದ್ದಾರೆ. ಜೈಲಿನಲ್ಲಿರಬೇಕಾದ ವ್ಯಕ್ತಿಗೆ ಬಿಜೆಪಿ ರತ್ನಗಂಬಳಿ ಹಾಕಿ ರಕ್ಷಿಸುತ್ತಿದೆ, ಈ ಮೂಲಕ ತೆರಿಗೆದಾರರ ಹಣವನ್ನು ಬಿಜೆಪಿ ದುರುಪಯೋಗ ಮಾಡುತ್ತಿದೆ ಎಂದು ಶೆರ್ಗಿಲ್ಲ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


