ಸಿಎಎ, ಎನ್ ಪಿಆರ್ ಭೀತಿ: ತಮಿಳುನಾಡು ಮುಸ್ಲಿಂ ಮುಖಂಡರಿಂದ ರಜನಿಕಾಂತ್ ಭೇಟಿ!
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಂಸಂಖ್ಯಾ ನೋಂದಣಿ ವಿಚಾರವಾಗಿ ತಮಿಳುನಾಡಿನ ಮುಸ್ಲಿಂ ಮುಖಂಡರು ಇಂದು ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನ ಭೇಟಿ ಚರ್ಚೆ ನಡೆಸಿದರು.

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಂಸಂಖ್ಯಾ ನೋಂದಣಿ ವಿಚಾರವಾಗಿ ತಮಿಳುನಾಡಿನ ಮುಸ್ಲಿಂ ಮುಖಂಡರು ಇಂದು ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನ ಭೇಟಿ ಚರ್ಚೆ ನಡೆಸಿದರು.
ಚೆನ್ನೈನಲ್ಲಿರುವ ರಜನಿಕಾಂತ್ ಅವರ ಮನೆಗೆ ಜಮಾತ್-ಉಲ್-ಉಲಾಮಾ ಸಬಾಯ್ ಸಂಘಟನೆಯ ನಿಯೋಗ ಆಗಮಿಸಿ ರಜಿನಿಕಾಂತ್ ಅವರನ್ನು ಭೇಟಿಯಾಗಿದೆ. ಈ ವೇಳೆ ಎನ್ಪಿಆರ್(national population register) ಕುರಿತು ಮನವಿಯನ್ನು ಸಲ್ಲಿಸಿದೆ.
ಭೇಟಿ ಬಳಿಕ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ.ಎಂ ಬಖಾವಿ, ನಮ್ಮ ನಿಯೋಗ ರಜಿನಿಕಾಂತ್ರನ್ನ ಭೇಟಿಯಾಗಿ, ಎನ್ಪಿಆರ್ಗೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನ ಚರ್ಚಿಸಲಾಯ್ತು. ಎನ್ಪಿಆರ್ನಿಂದ ಮುಸ್ಲಿಮರಿಗೆ ಆಗುವ ಸಮಸ್ಯೆಗಳ ಬಗ್ಗೆ ನಾವು ವಿವರಿಸಿದ್ದೇವೆ. ರಜಿನಿಕಾಂತ್ ಅವರು ನಮ್ಮ ವಾದವನ್ನ ಅರ್ಥ ಮಾಡಿಕೊಂಡಿದ್ದಾರೆ. ಮುಸ್ಲಿಮರಲ್ಲಿ ಆತಂಕ ನಿವಾರಿಸಲು ಅಗತ್ಯವಾದ ಕೆಲಸವನ್ನ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


