ದೇಶ

ಕೇಂದ್ರದಿಂದ 'ಅನ್ ಲಾಕ್  2' ಮಾರ್ಗಸೂಚಿ ಪ್ರಕಟ: ದೇಶಾದ್ಯಂತ ಯಾವೆಲ್ಲಾ ಸೇವೆ ಲಭ್ಯ, ಏನಿರಲ್ಲ? ಇಲ್ಲಿದೆ ವಿವರ

ಜುಲೈ 1-31ರನಡುವೆ ದೇಶಾದ್ಯಂತ 'ಅನ್ ಲಾಕ್ 2' ಜಾರಿಯಾಗಲಿದ್ದು ಇದಕ್ಕಾಗಿ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೇಂದ್ರದಿಂದ 'ಅನ್ ಲಾಕ್  2' ಮಾರ್ಗಸೂಚಿ ಪ್ರಕಟ: ದೇಶಾದ್ಯಂತ ಯಾವೆಲ್ಲಾ ಸೇವೆ ಲಭ್ಯ, ಏನಿರಲ್ಲ? ಇಲ್ಲಿದೆ ವಿವರ
Published On :

ನವದೆಹಲಿ: ಜುಲೈ 1-31ರನಡುವೆ ದೇಶಾದ್ಯಂತ 'ಅನ್ ಲಾಕ್ 2'  ಜಾರಿಯಾಗಲಿದ್ದು ಇದಕ್ಕಾಗಿ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಮಾರ್ಗಸೂಚಿಗಳ ಪ್ರಕಾರ, ಶಾಲೆ, ಕಾಲೇಜುಗಳು ಜುಲೈ 31 ರವರೆಗೆ ತೆರ್ಯುವಂತಿಲ್ಲ. ಆನ್‌ಲೈನ್ / ದೂರಶಿಕ್ಷಣಕ್ಕೆ ಅನುಮತಿ ಇದ್ದು ಇದಕ್ಕೆ ಪ್ರೋತ್ಸಾಹವಿದೆ.

ಕಂಟೈನ್‌ಮೆಂಟ್ ವಲಯಗಳಲ್ಲಿಯಥಾಸ್ಥಿತಿ ಜಾರಿಯಲ್ಲಿರಲಿದ್ದು ಅಗತ್ಯ ಚಟುವಟಿಕೆಗೆ ಮಾತ್ರ ಅನುಮತಿ ಸಿಕ್ಕಲಿದೆ.

ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನಿಗದಿಪಡಿಸಲಾಗಿದೆ.

ಅನ್ ಲಾಕ್ 2ಸಮಯದಲ್ಲಿ ಮೆಟ್ರೋ ರೈಲು, ಚಿತ್ರಮಂದಿರಗಳು, ಜಿಮ್ ಗಳು, ಬಾರ್‌ಗಳು  ತೆರ್ಯಲ್ಲ. ಇನ್ನು  ಜುಲೈ 31 ರವರೆಗೆ ಅಂತರರಾಷ್ಟ್ರೀಯ ವಿಮಾಯಾನ ಸಹ ಇರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.