ದೇಶ

ಭಾರತ ಒಂದು ಇಂಚು ಭೂಮಿಯನ್ನು ಬಿಟ್ಟುಕೊಟ್ಟಿಲ್ಲ; ಆದರೆ ಕಾಂಗ್ರೆಸ್ ನಾಚಿಕೆ ಬಿಟ್ಟುಕೊಟ್ಟಿದೆ - ಬಿಜೆಪಿ

ಲಡಾಖ್ ಗಡಿಯಲ್ಲಿ ಭಾರತಕ್ಕೆ ಒಂದು ಇಂಚಿನಷ್ಟು ಭೂಮಿಯನ್ನು ಕೂಡ ಬಿಟ್ಟುಕೊಟ್ಟಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ತಮ್ಮ ಮರ್ಯಾದೆಯನ್ನು ಬಿಟ್ಟುಕೊಟ್ಟಿದೆ ಎಂದು ಬಿಜೆಪಿ ಮಂಗಳವಾರ ಟೀಕಿಸಿದೆ.

ಭಾರತ ಒಂದು ಇಂಚು ಭೂಮಿಯನ್ನು ಬಿಟ್ಟುಕೊಟ್ಟಿಲ್ಲ; ಆದರೆ ಕಾಂಗ್ರೆಸ್ ನಾಚಿಕೆ ಬಿಟ್ಟುಕೊಟ್ಟಿದೆ - ಬಿಜೆಪಿ
ಸಂಬೀತ್ ಪಾತ್ರ
Published On :

ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತಕ್ಕೆ ಒಂದು ಇಂಚಿನಷ್ಟು ಭೂಮಿಯನ್ನು ಕೂಡ ಬಿಟ್ಟುಕೊಟ್ಟಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ತಮ್ಮ ಮರ್ಯಾದೆಯನ್ನು ಬಿಟ್ಟುಕೊಟ್ಟಿದೆ ಎಂದು ಬಿಜೆಪಿ ಮಂಗಳವಾರ ಟೀಕಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, "ಸೋನಿಯಾಜಿ, ನಾವು ನಿಮಗೆ ಸ್ಪಷ್ಟವಾಗಿ ಹೇಳ ಬಯಸುತ್ತೇವೆ. ಭಾರತ ಒಂದು ಇಂಚಿನ ಭೂಮಿಯನ್ನು ಕೂಡ ಬಿಟ್ಟುಕೊಟ್ಟಿಲ್ಲ. ಆದರೆ, ಕಾಂಗ್ರೆಸ್ ನಾಚಿಕೆ ಬಿಟ್ಟಿರುವುದು ಮಾತ್ರ ಬೇಸರದ ಸಂಗತಿ" ಎಂದಿದ್ದಾರೆ.

ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಕೀಯ ಅಥವಾ ರಾಜಿಯಿಲ್ಲ. ಇಂದು ನಾವೆಲ್ಲರೂ ನಮ್ಮ ಸೇನೆಯ ಬದ್ಧತೆ ಮತ್ತು ಸದೃಢತೆಯೊಂದಿಗೆ ನಿಲ್ಲಬೇಕು. ಚೀನಾ ನಮ್ಮ ದೇಶವನ್ನು ಆಕ್ರಮಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.