ಭಾರತದ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ: ಪರಿಷ್ಕೃತ ಫಿಚ್ ರೇಟಿಂಗ್ಸ್
ಭಾರತದ ಆರ್ಥಿಕ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ ಸಾಗಿರುವುದಾಗಿ ಗುರುವಾರ ಪರಿಷ್ಕೃತ ಫಿಚ್ ರೇಟಿಂಗ್ಸ್ ನಲ್ಲಿ ಹೇಳಲಾಗಿದೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗವು ವರ್ಷದ ದೇಶದ ಬೆಳವಣಿಗೆಯ ಭವಿಷ್ಯವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆಮತ್ತು ಹೆಚ್ಚಿನ ಸಾರ್ವಜನಿಕ - ಸಾಲದ ಹೊರೆಗೆ ಸಂಬಂಧಿಸಿದ ಸವಾಲುಗಳನ್ನು ಬಹಿರಂಗಪಡಿಸಿದೆ ಎಂದಿದೆ.

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ ಸಾಗಿರುವುದಾಗಿ ಗುರುವಾರ ಪರಿಷ್ಕೃತ ಫಿಚ್ ರೇಟಿಂಗ್ಸ್ ನಲ್ಲಿ ಹೇಳಲಾಗಿದೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗವು ವರ್ಷದ ದೇಶದ ಬೆಳವಣಿಗೆಯ ಭವಿಷ್ಯವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆಮತ್ತು ಹೆಚ್ಚಿನ ಸಾರ್ವಜನಿಕ - ಸಾಲದ ಹೊರೆಗೆ ಸಂಬಂಧಿಸಿದ ಸವಾಲುಗಳನ್ನು ಬಹಿರಂಗಪಡಿಸಿದೆ ಎಂದಿದೆ.
ಮತ್ತೊಂದು ರೇಟಿಂಗ್ ಏಜೆನ್ಸಿ ಮೂಡಿ ಈ ತಿಂಗಳ ಆರಂಭದಲ್ಲಿ ಭಾರತದ ಸಾರ್ವಭೌಮ ರೇಟಿಂಗ್ ಅನ್ನು 22 ವರ್ಷಗಳಲ್ಲಿ ಮೊದಲ ಬಾರಿಗೆ 'ಬಾ 2' ನ ಕಡಿಮೆ ಹೂಡಿಕೆ ದರ್ಜೆಗೆ ಇಳಿಸಿದ ನಂತರ ಈ ಬೆಳವಣಿಗೆಯಾಗಿದೆ.
ಫಿಚ್ ರೇಟಿಂಗ್ಸ್ ಭಾರತದ ದೀರ್ಘಕಾಲೀನ ವಿದೇಶಿ-ಕರೆನ್ಸಿ ನೀಡುವವರ ಡೀಫಾಲ್ಟ್ ರೇಟಿಂಗ್ (ಐಡಿಆರ್) ಮೇಲಿನ ದೃಷ್ಟಿಕೋನವನ್ನು ಸ್ಥಿರದಿಂದ ಋಣಾತ್ಮಕವಾಗಿ ಪರಿಷ್ಕರಿಸಿದೆ ಮತ್ತು ಬಿಬಿಬಿಯಲ್ಲಿ ರೇಟಿಂಗ್ ದೃಢಪಡಿಸಿದೆ.
ಲಾಕ್ ಡೌನ್ ಕಾರಣದಿಂದಾಗಿ ಮಾರ್ಚ್ 2021 ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಆರ್ಥಿಕ ಚಟುವಟಿಕೆಯು ಶೇಕಡಾ 5 ರಷ್ಟು ಕುಗ್ಗಲಿದೆ ಎಂದು ಫಿಚ್ ನಿರೀಕ್ಷಿಸಿದೆ.
ಕೊರೋನಾ ವೈರಸ್ ಸಾಂಕ್ರಾಮಿಕವು ಈ ವರ್ಷದ ಭಾರತದ ಬೆಳವಣಿಗೆಯ ದೃಷ್ಟಿಕೋನವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆ ಮತ್ತು ಹೆಚ್ಚಿನ ಸಾರ್ವಜನಿಕ-ಸಾಲದ ಹೊರೆಗೆ ಸಂಬಂಧಿಸಿದ ಸವಾಲುಗಳನ್ನು ಬಹಿರಂಗಪಡಿಸಿದೆ. ಮರುಕಳಿಸುವಿಕೆಯು ಮುಖ್ಯವಾಗಿ ಕಡಿಮೆ-ಮೂಲ ಪರಿಣಾಮದಿಂದ ಉಂಟಾಗುತ್ತದೆ ಎಂದು ಅದು ಹೇಳಿದೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳನ್ನು ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಸಮಸ್ಯೆಯು ಮತ್ತಷ್ಟು ಹೆಚ್ಟಾಗಲಿದೆ ಎಂಬುದರ ಬಗ್ಗೆ ಫಿಚ್ ಮುನ್ಸೂಚನೆ ನೀಡಿದೆ. ಸಾಂಕ್ರಾಮಿಕ ರೋಗದ ಪರಿಣಾಮವಾಗಿ ವಿಶೇಷವಾಗಿ ಹಣಕಾಸು ವಲಯದಲ್ಲಿ ಈ ಹಿಂದೆ ಅಂದಾಜು ಮಾಡಿದ್ದಂತೆ ಶೇ.6ರಿಂದ 7 ರಷ್ಟು ಬೆಳವಣಿಗೆಯತ್ತ ಭಾರತ ಮರಳಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಫಿಚ್ ರೇಟಿಂಗ್ಸ್ ಏಜೆನ್ಸಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


