ಜಮ್ಮು-ಕಾಶ್ಮೀರ: ಅನಂತ್ ನಾಗ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಸೆರೆ
ಕೇಂದ್ರಾಡಳಿತ ಪ್ರದೇಶದ ಜಮ್ಮು-ಕಾಶ್ಮೀರದ ಅನಂತ್ ನಾಗ್ ಬಳಿ ಭದ್ರತಾ ಪಡೆಗಳು ಇಂದು ಉಗ್ರನೊಬ್ಬನನ್ನು ಸೆರೆ ಹಿಡಿದಿದ್ದಾರೆ. ಇಮ್ರಾನ್ ನಬಿ ಬಂಧಿತ ಉಗ್ರನಾಗಿದ್ದಾನೆ

ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶದ ಜಮ್ಮು-ಕಾಶ್ಮೀರದ ಅನಂತ್ ನಾಗ್ ಬಳಿ ಭದ್ರತಾ ಪಡೆಗಳು ಇಂದು ಉಗ್ರನೊಬ್ಬನನ್ನು ಸೆರೆ ಹಿಡಿದಿದ್ದಾರೆ. ಇಮ್ರಾನ್ ನಬಿ ಬಂಧಿತ ಉಗ್ರನಾಗಿದ್ದಾನೆ.
ಅನಂತ್ ನಾಗ್ ಬಳಿ ಜಂಗ್ಲಾತ್ ಮಂಡಿ ಬಳಿ ಕಳೆದ ರಾತ್ರಿ ನಬಿಯನ್ನು ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದು, ಆತನಿಂದ ಪಿಸ್ತೂಲ್ ವೊಂದನ್ನು ವಶಪಡಿಸಿಕೊಂಡಿದ್ದಾರೆ.
ಈ ವರ್ಷದ ಮೇ 10 ರಂದು ಮನೆಯಿಂದ ಓಡಿ ಹೋಗಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿಕೊಂಡಿದ್ದ ಎಂದು ಭಾರತೀಯ ಸೇನೆಯ ಚೀನಾರ್ ಕಾರ್ಪ್ಸ್ ತಿಳಿಸಿದೆ.
ಕುಲ್ಗಾಮ್ ನಿವಾಸಿಯಾದ ನಬಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಮನೆಯಿಂದ ಏಕೆ ಹೊರಗೆ ಹೋಗಲಾಯಿತು, ಉಗ್ರ ಸಂಘಟನೆಯೊಂದಿಗೆ ಹೇಗೆ ಸಂಪರ್ಕಕ್ಕೆ ಬಂದಿದ್ದಾಗಿ ಪ್ರಶ್ನಿಸಲಾಗಿದೆ.
In a joint operation, security forces apprehended terrorist Imran Nabi Dar late last night near Janglat Mandi, Anantnag. 1 pistol recovered. He had joined terrorism on 10th May this year: Chinar Corps, Indian Army #JammuandKashmir pic.twitter.com/aUxx3GASNL
— ANI (@ANI) June 18, 2020
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


