ಉತ್ತರ ಪ್ರದೇಶ: ಕೋವಿಡ್-19 ಹರಡುವ ಭೀತಿಯಿಂದ ಸೋಂಕಿತ ಮಗುವಿನ ಜೊತೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದ ತಾಯಿ!
ಕೋವಿಡ್-19 ಸೋಂಕು ತಗುಲಿದ 8 ವರ್ಷದ ಮಗುವಿನ ಜೊತೆ ಆಸ್ಪತ್ರೆಗೆ ಹೋಗಲು, ಸೋಂಕು ಹರಡುವ ಭೀತಿಯಿಂದ ಆ ಮಗುವಿನ ತಾಯಿ ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದ ಸೂರಜ್ ಕುಂಡ್ ನಲ್ಲಿ ನಡೆದಿದೆ.

ಗೋರಖ್ ಪುರ: ಕೋವಿಡ್-19 ಸೋಂಕು ತಗುಲಿದ 8 ವರ್ಷದ ಮಗುವಿನ ಜೊತೆ ಆಸ್ಪತ್ರೆಗೆ ಹೋಗಲು, ಸೋಂಕು ಹರಡುವ ಭೀತಿಯಿಂದ ಆ ಮಗುವಿನ ತಾಯಿ ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದ ಸೂರಜ್ ಕುಂಡ್ ನಲ್ಲಿ ನಡೆದಿದೆ.
ಕೋವಿಡ್-19 ಸೋಂಕಿತ ಮಗುವಿನಿಂದ ತಮಗೂ ಕೊರೋನಾ ಸೋಂಕು ಹರಡುತ್ತದೆ ಎಂಬ ಭಯದಿಂದ ಮಗುವಿನ ತಾಯಿ ಆಸ್ಪತ್ರೆಗೆ ಹೋಗುವುದಕ್ಕೆ ನಿರಾಕರಿಸಿದ್ದರು ಎಂದು ಗೋರಖ್ ಪುರದ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಶ್ರೀಕಾಂತ್ ತಿವಾರಿ ವರದಿಗಾರರಿಗೆ ತಿಳಿಸಿದ್ದಾರೆ.
ಕುಟುಂಬ ಸದಸ್ಯರು ಇಲ್ಲದೇ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸುವುದು ಕಷ್ಟವಾಗಿತ್ತು. ಇದಕ್ಕಾಗಿಯೇ ನಮ್ಮ ತಂಡದ ಸದಸ್ಯರು ಮಗುವಿನ ಮನೆಗೆ ತೆರಳಿ ಆಕೆಯ ತಾಯಿಗೆ ಮನವರಿಕೆ ಮಾಡಿಕೊಟ್ಟರು. ಕೋವಿಡ್-19 ಕುರಿತಾದ ಮಾಹಿತಿ ನೀಡಿ ಮಗುವಿನ ತಾಯಿಗೆ ಮನವರಿಕೆ ಮಾಡಿದ ನಂತರ ಆಕೆ ಆಸ್ಪತ್ರೆಗೆ ಬರಲು ಒಪ್ಪಿದರು, ಸೋಂಕಿತ ಮಗುವಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಎಂಒ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


