ಛತ್ತೀಸ್ಘರ್: ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ, ಶವವನ್ನು ಪೋಲೀಸರಿಂದ ಮರೆಮಾಚಿದ ದುಷ್ಕರ್ಮಿಗಳು
ಭೂ ವಿವಾದವೊಂದಕ್ಕೆ ಸಂಬಂಧಿಸಿ ಉಂಟಾದ ಜಗಳದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಛತ್ತೀಸ್ಘರ್ ನ ಸೂರಜ್‌ಪುರ ಜಿಲ್ಲೆಯ ದುರ್ಸ್ತಾದ ಚಾಂದನಿ ಬಿಹಾರಪುರದ ಪಾಸಲ್‌ನಲ್ಲಿ ನಡೆದಿದೆ. ಶನಿವಾರ ಸಂಜೆ ನಡೆದ ಪ್ರಕರಣದಲ್ಲಿ ಕೊಲೆಯ ನಂತರ ಶವವನ್ನು ಪೋಲೀಸರ ಕಣ್ಣಿಗೆ ಬೀಳದಂತೆ ಮುಚ್ಚಿಡಲಾಗಿದೆ.

ಸೂರಜ್‌ಪುರ(ಛತ್ತೀಸ್ಘರ್): ಭೂ ವಿವಾದವೊಂದಕ್ಕೆ ಸಂಬಂಧಿಸಿ ಉಂಟಾದ ಜಗಳದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಛತ್ತೀಸ್ಘರ್ ನ ಸೂರಜ್‌ಪುರ ಜಿಲ್ಲೆಯ ದುರ್ಸ್ತಾದ ಚಾಂದನಿ ಬಿಹಾರಪುರದ ಪಾಸಲ್‌ನಲ್ಲಿ ನಡೆದಿದೆ. ಶನಿವಾರ ಸಂಜೆ ನಡೆದ ಪ್ರಕರಣದಲ್ಲಿ ಕೊಲೆಯ ನಂತರ ಶವವನ್ನು ಪೋಲೀಸರ ಕಣ್ಣಿಗೆ ಬೀಳದಂತೆ ಮುಚ್ಚಿಡಲಾಗಿದೆ.
ಮೂಲಗಳ ಪ್ರಕಾರ, ಬಿಜೆಪಿ ನಾಯಕ ಚಾಂದನಿ ಬಿಹಾರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಸಲ್ ಗ್ರಾಮದ ನಿವಾಸಿ ಶಿವ ಚರಣ್ ಕಾಶಿ ಕೊಲೆಯಾದ ವ್ಯಕ್ತಿ. ಇವರು ಕ ಮಧ್ಯಪ್ರದೇಶದ ಸಿಂಗ್ರೌಲಿ ನಿವಾಸಿ ವ್ಯಕ್ತಿಯೊಂದಿಗೆ ಭೂ ವಿವಾದವನ್ನು ಹೊಂದಿದ್ದರು. ಇದೀಗ ಅವರಿಂದಲೇ ಗುಂಡೇಟು ತಿಂದು ಸಾವನ್ನಪ್ಪಿದ್ದಾರೆ.
ಶಿವ ಚರಣ್ ಕಾಶಿ ಶನಿವಾರ ಸಂಜೆ, ಭೂ ವಿವಾದ ಕುರಿತು ಗಲಾಟೆ ನಡೆದಾಗ ಕೊಲೆಯಾಗಿದ್ದು ಕೊಲೆಯ ನಂತರ, ಶವವನ್ನು ಎಲ್ಲೋ ಮರೆಮಾಡಲಾಗಿದೆ. ಮಾಹಿತಿ ದೊರೆತ ಸೂರಜ್‌ಪುರ ಪೊಲೀಸರು ಸ್ಥಳಕ್ಕೆ ತಲುಪಿದ್ದು ಪರಿಶೀಲಿಸಿದ್ದಾರೆ.
ಸ್ಥಳ ಪರಿಶೀಲನೆ ವೇಳೆ ಒಂದು ರಕ್ತದ ಕಲೆಗಳಾಗಿರುವ ಲುಂಗಿ ಪತ್ತೆಯಾಗಿದೆ. . ಅದೇ ಸಮಯದಲ್ಲಿ, ಮೃತದೇಹವನ್ನು ಎಳೆದ ಕುರುಹುಗಳು ಸಹ ಕಂಡುಬಂದಿವೆ. ಮೃತದೇಹಕ್ಕಾಗಿ ಪೋಲೀಸರು ಶೋಧಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


