ನಿಮ್ಮ ಸಮೀಪದ ಕೊರೋನಾ ಟೆಸ್ಟಿಂಗ್ ಕೇಂದ್ರದ ಬಗ್ಗೆ ಮಾಹಿತಿ ನೀಡಲಿದೆ ಗೂಗಲ್
ಇದುವರೆಗೆ ನಮ್ಮ ಸಮೀಪದ ಹೋಟೆಲ್, ರೆಸ್ಟೊರೆಂಟ್ ಹಾಗೂ ಇತರೆ ಸ್ಥಳಗಳನ್ನು ತೋರಿಸುತ್ತಿದ್ದ ಗೂಗಲ್, ಇನ್ನುಮುಂದೆ ನಮ್ಮ ಸಮೀಪಿದ ಕೊವಿಡ್-19 ಪರೀಕ್ಷಾ ಕೇಂದ್ರಗಳನ್ನು ತೋರಿಸಲಿದೆ ಎಂದು ಶುಕ್ರವಾರ ಗೂಗಲ್ ತಿಳಿಸಿದೆ.

ನವದೆಹಲಿ: ಇದುವರೆಗೆ ನಮ್ಮ ಸಮೀಪದ ಹೋಟೆಲ್, ರೆಸ್ಟೊರೆಂಟ್ ಹಾಗೂ ಇತರೆ ಸ್ಥಳಗಳನ್ನು ತೋರಿಸುತ್ತಿದ್ದ ಗೂಗಲ್, ಇನ್ನುಮುಂದೆ ನಮ್ಮ ಸಮೀಪಿದ ಕೊವಿಡ್-19 ಪರೀಕ್ಷಾ ಕೇಂದ್ರಗಳನ್ನು ತೋರಿಸಲಿದೆ ಎಂದು ಶುಕ್ರವಾರ ಗೂಗಲ್ ತಿಳಿಸಿದೆ.
ಸರ್ಚ್ ನೀಯರ್‌ಬೈ ಆಪ್ಷನ್ ಮೂಲಕ ಈಗ ಕೊರೋನಾ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಬಳಕೆದಾರರಿಗೆ ನೀಡುತ್ತಿದೆ. ಗೂಗಲ್ ಸರ್ಚ್, ಗೂಗಲ್ ಅಸಿಸ್ಟೆಂಟ್ ಮತ್ತು ಮ್ಯಾಪ್ ಸಂಯೋಜನೆಯೊಂದಿಗೆ ಈ ಫೀಚರ್ ಬಳಕೆದಾರರಿಗೆ ಲಭ್ಯವಿದೆ ಗೂಗಲ್ ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹಾಗೂ ಮೈಗೊವ್ ಮೂಲಕ ಪಡೆದ ಮಾಹಿತಿಯನ್ನು ಆಧರಿಸಿ, ಸರ್ಕಾರದಿಂದ ಮಾನ್ಯತೆ ಪಡೆದ ಕೊವಿಡ್- 19 ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಗೂಗಲ್ ಜನರಿಗೆ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ದೇಶಾದ್ಯಂತ ಸುಮಾರು 300 ನಗರಗಳಲ್ಲಿ 700 ಟೆಸ್ಟಿಂಗ್ ಲ್ಯಾಬ್ ಗೂಗಲ್ ಸರ್ಚ್‌ನಲ್ಲಿ ನೋಂದಣಿ ಮಾಡಿಕೊಂಡಿವೆ. ಇದರಿಂದ ಜನರಿಗೆ ಅನುಕೂಲವಾಗಲಿದ್ದು, ಸುಲಭದಲ್ಲಿ ತಾವಿರುವ ಸ್ಥಳಕ್ಕೆ ಸಮೀಪದಲ್ಲಿಯೇ ಕೊವಿಡ್ -19 ಪರೀಕ್ಷಾ ಕೇಂದ್ರದ ಮಾಹಿತಿ ಪಡೆಯಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


