ಜಮ್ಮು-ಕಾಶ್ಮೀರ: ಲಷ್ಕರ್ ಎ ತೊಯ್ಬಾ ಉಗ್ರ ಬಂಧನ, ಶಸ್ತ್ರಾಸ್ತ್ರ ವಶ
ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಮುಂದುವರಿದಿದೆ.ಇಂದು ನಸುಕಿನ ವೇಳೆ ನಡೆದ ದಾಳಿಯಲ್ಲಿ ಲಷ್ಕರ್ ಎ ತೊಯ್ಬಾದ ಓರ್ವ ಉಗ್ರ ಸಿಕ್ಕಿಬಿದ್ದಿದ್ದಾನೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಮುಂದುವರಿದಿದೆ.
ಇಂದು ನಸುಕಿನ ವೇಳೆ ನಡೆದ ದಾಳಿಯಲ್ಲಿ ಲಷ್ಕರ್ ಎ ತೊಯ್ಬಾದ ಓರ್ವ ಉಗ್ರ ಸಿಕ್ಕಿಬಿದ್ದಿದ್ದಾನೆ. ಉಗ್ರನನ್ನು ಮೊಹಮ್ಮದ್ ಯೂಸಫ್ ಖಾನ್ ನ ಪುತ್ರ ಜಾಕಿರ್ ಖಾನ್ ಎಂದು ಗುರುತಿಸಲಾಗಿದ್ದು ಶೋಪಿಯಾನ್ ನಿವಾಸಿಗಳಾಗಿದ್ದಾರೆ.
ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕೊಜಪುರದಲ್ಲಿ ಲಷ್ಕರ್ ಎ ತೊಯ್ಬಾ ಉಗ್ರನನ್ನು ಭದ್ರತಾ ಪಡೆ ಯೋಧರು ಬಂಧಿಸಿದ್ದಾರೆ. ಆತನ ಬಳಿಯಿಂದ 9ಎಂಎಂ ಪಿಸ್ತೂಲ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಉಗ್ರ ಸಂಬಂಧಿ ಚಟುವಟಿಕೆಗಳಲ್ಲಿ ಜಾಕಿರ್ ಭಾಗಿಯಾಗಿದ್ದಾನೆ ಎಂದು ನಿಖರ ಮಾಹಿತಿ ಪಡೆದ ಪೊಲೀಸರು ಖೊಜ್ ಪುರ ರೆಬಾನ್ ಗ್ರಾಮದಲ್ಲಿ ದಾಳಿ ನಡೆಸಿದರು. ಇತ್ತೀಚೆಗೆ ಆತ ಉಗ್ರ ಪಡೆಗೆ ಸೇರಿದ್ದು ಅದರಲ್ಲಿ ಸಕ್ರಿಯನಾಗಲು ಹೊರಟಿದ್ದ.
ಈ ಸಂಬಂಧ ಪೊಲೀಸರು ಕೇಸು ದಾಖಲಿಸಿ ಹೆಚ್ಚಿನ ವಿಚಾರಣೆ ನಡೆಯಬೇಕಿದೆ. ಈ ವರ್ಷ 20ಕ್ಕೂ ಹೆಚ್ಚು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


