ವಿಮಾನ ಪತನ: ಟ್ರೈನಿ ಪೈಲಟ್, ಮಾರ್ಗದರ್ಶಕ ಸಾವು
ಎರಡು ಆಸನಗಳ ವಿಮಾನವೊಂದು ಒಡಿಶಾ ರಾಜ್ಯದ ಧೆಂಕನಲ್ ಜಿಲ್ಲೆಯ ಬಳಿ ಅಪಘಾತಕ್ಕೀಡಾಗಿ ಟ್ರೈನಿ ಪೈಲಟ್ ಹಾಗೂ ಆಕೆಗೆ ತರಬೇತಿ ನೀಡುತ್ತಿದ್ದ ಮಾರ್ಗದಶಕರೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ

ಒಡಿಶಾ: ಎರಡು ಆಸನಗಳ ವಿಮಾನವೊಂದು ಒಡಿಶಾ ರಾಜ್ಯದ ಧೆಂಕನಲ್ ಜಿಲ್ಲೆಯ ಬಳಿ ಅಪಘಾತಕ್ಕೀಡಾಗಿ ಟ್ರೈನಿ ಪೈಲಟ್ ಹಾಗೂ ಆಕೆಗೆ ತರಬೇತಿ ನೀಡುತ್ತಿದ್ದ ಮಾರ್ಗದಶಕರೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಯ ಬಿರಸಲದಲ್ಲಿರುವ ಸರ್ಕಾರಿ ವಾಯುಯಾನ ತರಬೇತಿ ಸಂಸ್ಥೆಯಲ್ಲಿ ಟಾರ್ಮ್ಯಾಕ್‌ನಲ್ಲಿ ತರಬೇತುದಾರ ವಿಮಾನ ಅಪಘಾತಕ್ಕೀಡಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಕೆ ನಾಯಕ್ ತಿಳಿಸಿದ್ದಾರೆ.
ಇಬ್ಬರನ್ನು ಕಾಮಕ್ಯನಗರ ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದ್ದು, ಅವರು ಅಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ತಾಂತ್ರಿಕ ದೋಷದಿಂದ ಈ ಅಪಘಾತ ಸಂಭವಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ತರಬೇತಿ ನೀಡುತ್ತಿದ್ದ ಮಾರ್ಗದರ್ಶಕರು ಪುರುಷರಾಗಿದ್ದು, ಅವರ ಗುರುತನ್ನು ಕಂಡುಹಿಡಿಯಲಾಗುತ್ತಿದೆ ಎಂದು ಕಾಮಕ್ಯನಗರ ಠಾಣೆ ಉಸ್ತುವಾರಿ ಇನ್ಸ್ ಪೆಕ್ಟರ್ ಎ ದಾಲುವಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


