ದುಷ್ಕರ್ಮಿಗಳಿಂದ ಸ್ಪೈಸ್ ಜೆಟ್ ಪೈಲಟ್ ಮೇಲೆ ಹಲ್ಲೆ, ಗನ್ ತೋರಿಸಿ ಹಣ ಲೂಟಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯ ಪೈಲಟ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಗನ್ ತೋರಿಸಿ ಹಣ ಲೂಟಿ ಮಾಡಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯ ಪೈಲಟ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಗನ್ ತೋರಿಸಿ ಹಣ ಲೂಟಿ ಮಾಡಿದ್ದಾರೆ.
ದಕ್ಷಿಣ ದೆಹಲಿಯ ಐಐಟಿ ದೆಹಲಿ ಸಮೀಪದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಪೈಲಟ್ ಯುವರಾಜ್ ತೆವಾತಿಯಾರನ್ನು 10 ಜನ ದುಷ್ಕರ್ಮಿಗಳ ತಂಡ ತಡೆದಿದ್ದು, ಈ ವೇಳೆ ಕಾರಿನ ಕಿಟಕಿ ಗ್ಲಾಸ್ ಅನ್ನು ಒಡೆದು ಹಾಕಿದ್ದಾರೆ. ಅಲ್ಲದೆ ಕಾರಿನಲ್ಲಿದ್ದ ಪೈಲಟ್ ರನ್ನು ಮನಸೋ ಇಚ್ಛೆ ಥಳಿಸಿದ್ದು, ಚಾಕು ಮತ್ತು ಗನ್ ತೋರಿಸಿ ಅವರ ಬಳಿ ಇದ್ದ ಸುಮಾರು 34 ಸಾವಿರ ರೂ ಹಣ ಮತ್ತು ಇತರೆ ಅಮೂಲ್ಯ ವಸ್ತಗಳನ್ನು ಲೂಟಿ ಮಾಡಿದ್ದಾರೆ. ಗನ್ ಇಟ್ಟಿದ್ದಷ್ಟೇ ಅಲ್ಲದೆ ಚಾಕುವಿನಿಂದ ಇರಿಸು ಗಾಯಗೊಳಿಸಿದ್ದಾರೆ. ರಕ್ತಸಿಕ್ತ ಪೈಲಟ್ ಹಾಗೂ ಅವರ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ಫ್ಲೈಟ್ ಕ್ಯಾಪ್ಟನ್ ಯುವರಾಜ್, ಮುಂಜಾನೆ 1 ಗಂಟೆ ಸಮಯದಲ್ಲಿ ಮನೆಯಿಂದ ಫರೀದಾಬಾದ್ ನಲ್ಲಿರುವ ಕಚೇರಿಗೆ ತೆರಳುತ್ತಿದ್ದರು. ದೆಹಲಿ ಐಐಟಿ ಬಳಿ ಕಾರು ಚಲಿಸುತ್ತಿದ್ದಾಗ ಈ ದಾಳಿ ಮಾಡಲಾಗಿದೆ. ದುಷ್ಕರ್ಮಿಗಳ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಯುವರಾಜ್ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ದೆಹಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


