ದೇಶ

ದೇಶದಲ್ಲಿ ಕೊರೋನಾ ರೌದ್ರನರ್ತನ: 24 ಗಂಟೆಗಳಲ್ಲಿ ದಾಖಲೆಯ 38,902 ಮಂದಿಯಲ್ಲಿ ವೈರಸ್ ಪತ್ತೆ, 543 ಮಂದಿ ಬಲಿ

ಸತತ ನಾಲ್ಕನೇ ದಿನವಾದ ಭಾನುವಾರ ಕೂಡ ದೇಶದಾದ್ಯಂತ ದಾಖಲೆಯ ಪ್ರಮಾಣದಲ್ಲಿ ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,902 ಮಂದಿಯಲ್ಲಿ ವೈರಸ್ ಪತ್ತೆಯಾಗುವುದರೊಂದಿದೆ ಒಟ್ಟು ಸೋಂಕಿತರ ಸಂಖ್ಯೆ 10,77,618ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಕೊರೋನಾ ರೌದ್ರನರ್ತನ: 24 ಗಂಟೆಗಳಲ್ಲಿ ದಾಖಲೆಯ 38,902 ಮಂದಿಯಲ್ಲಿ ವೈರಸ್ ಪತ್ತೆ, 543 ಮಂದಿ ಬಲಿ
ಸಂಗ್ರಹ ಚಿತ್ರ
Published On :

ನವದೆಹಲಿ: ಸತತ ನಾಲ್ಕನೇ ದಿನವಾದ ಭಾನುವಾರ ಕೂಡ ದೇಶದಾದ್ಯಂತ ದಾಖಲೆಯ ಪ್ರಮಾಣದಲ್ಲಿ ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,902 ಮಂದಿಯಲ್ಲಿ ವೈರಸ್ ಪತ್ತೆಯಾಗುವುದರೊಂದಿದೆ ಒಟ್ಟು ಸೋಂಕಿತರ ಸಂಖ್ಯೆ 10,77,618ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಇನ್ನು ನಿನ್ನೆ ಒಂದೇ ದಿನ 543 ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 26,816ಕ್ಕೆ ಏರಿಕೆಯಾಗಿದೆ. 

ಇದೇ ವೇಳೆ 10,77,618 ಮಂದಿ ಸೋಂಕಿತರ ಪೈಕಿ 6,77,423 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, 3,73,379 ಮಂದಿ ಇನ್ನೂ ಸೋಂಕಿನಿಂದ ಬಳಲುತ್ತಿದ್ದಾರೆ. 

ಮತ್ತೊಂದು ಆತಂಕದ ವಿಚಾರವೆಂದರೆ ಕಳೆದ 4 ದಿನಗಳಿಂದ ಹೊಸದಾಗಿ 1,10,040 ಸೋಂಕಿತರು ಪತ್ತೆಯಾಗಿದ್ದಾರೆ. 1913 ಜನರು ಸಾವನ್ನಪ್ಪಿದ್ದಾರೆ. ಈ ಹಿಂದೆಲ್ಲಾ 20, 15, 7 ದಿನಕ್ಕೆ 1 ಲಕ್ಷ ಹೊಸ ಕೇಸು ಪತ್ತೆಯಾಗುತ್ತಿದ್ದರೆ, ಅದೀಗ 3ಕ್ಕಂತಲೂ ಕಡಿಮೆ ದಿನಕ್ಕೆ ಇಳಿದಿದೆ. ಇದೇ ಪ್ರಮಾಣದಲ್ಲಿ ಪರೀಕ್ಷೆ ಹೆಚ್ಚಾದರೆ, ನಿತ್ಯವೂ 50,000 ಹೊಸ ಸೋಂಕಿತರು ಪತ್ತೆಯಾದರೂ ಅಚ್ಚರಿಯಿಲ್ಲ ಎನ್ನಲಾಗಿದೆ. 

ಇನ್ನು ರಾಜ್ಯವಾರು ಪರಿಶೀಲನೆ ನಡೆಸಿದರೆ, ಮಹಾರಾಷ್ಟ್ರದಲ್ಲಿ ನಿನ್ನೆ ಮತ್ತೆ 8 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ, ತಮಿಳುನಾಡಿನಲ್ಲಿ ಶನಿವಾರ 4807, ಕರ್ನಾಟಕ 4537, ಆಂಧ್ರಪ್ರದೇಶ 3963, ಪಶ್ಚಿಮ ಬಂಗಾಳ 2198, ಬಿಹಾರ 1667, ದೆಹಲಿ 1475 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಕೊರೋನಾ ಸೋಂಕಿಗೆ ನಿನ್ನೆ ತಮಿಳುನಾಡಿನಲ್ಲಿ 88, ಆಂಧ್ರಪ್ರದೇಶ 52, ಪಶ್ಚಿಮ ಬಂಗಾಳ 27, ದೆಹಲಿ 26 ಮತ್ತು ಗುಜರಾತ್ ನಲ್ಲಿ 19 ಮಂದಿ ಬಲಿಯಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.