ದೇಶ

ಪ್ರಿಯಕರನನೊಂದಿಗೆ ಕ್ವಾರಂಟೈನ್ ಆಗಲು ಇವನೇ ನನ್ನ ಪತಿ ಎಂದು ಸುಳ್ಳು ಹೇಳಿದ ಮಹಿಳಾ ಪೊಲೀಸ್ ಪೇದೆ!

ನಾಗಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಿವಾಹಿತ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರು ತಾವು ಸಂಬಂಧ ಹೊಂದಿದ್ದ ವಿವಾಹಿತ ಪುರಷನೊಂದಿಗೆ ಕೌರಂಟೈನ್‌ ಆಗಿದ್ದಾರೆ. ಇದಕ್ಕಾಗಿ ವ್ಯಕ್ತಿಯನ್ನು ತನ್ನ ಪತಿ ಎಂದು ಸ್ಥಳೀಯಾಡಳಿತದ ಬಳಿ ಸುಳ್ಳು ಹೇಳಿರುವುದು ಬಹಿರಂಗವಾಗಿದೆ.

ಪ್ರಿಯಕರನನೊಂದಿಗೆ ಕ್ವಾರಂಟೈನ್ ಆಗಲು ಇವನೇ ನನ್ನ ಪತಿ ಎಂದು ಸುಳ್ಳು ಹೇಳಿದ ಮಹಿಳಾ ಪೊಲೀಸ್ ಪೇದೆ!
ಸಾಂದರ್ಭಿಕ ಚಿತ್ರ
Published On :

ನಾಗಪುರ: ನಾಗಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಿವಾಹಿತ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರು ತಾವು ಸಂಬಂಧ ಹೊಂದಿದ್ದ ವಿವಾಹಿತ ಪುರಷನೊಂದಿಗೆ ಕೌರಂಟೈನ್‌ ಆಗಿದ್ದಾರೆ.  ಇದಕ್ಕಾಗಿ ವ್ಯಕ್ತಿಯನ್ನು ತನ್ನ ಪತಿ ಎಂದು ಸ್ಥಳೀಯಾಡಳಿತದ ಬಳಿ ಸುಳ್ಳು ಹೇಳಿರುವುದು ಬಹಿರಂಗವಾಗಿದೆ. 

‘ಮಹಿಳಾ ಕಾನ್‌ಸ್ಟೇಬಲ್‌ನ ಸಹೋದ್ಯೋಗಿಗೆ ಇತ್ತೀಚೆಗೆ ಕೊರೊನಾ ವೈರಸ್‌ ಸೋಂಕು ತಗುಲಿತ್ತು. ಪ್ರಾಥಮಿಕ ಸಂಪರ್ಕದ ಕಾರಣಕ್ಕೆ ಮಹಿಳಾ ಕಾನ್‌ಸ್ಟೇಬಲ್‌ ಅನ್ನು ಕ್ವಾರಂಟೈನ್‌ ಮಾಡಬೇಕಾಗಿ ಬಂದಿತ್ತು,ಈ ವಿಷಯ ಮಹಿಳಾ ಪೇದೆಗೆ ತಿಳಿಸಿದಾಗ ಆಕೆ, ‘ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಪತಿಯನ್ನೂ ನನ್ನೊಂದಿಗೆ ಕ್ವಾರಂಟೈನ್‌ ಮಾಡಬೇಕು,’ ಎಂದು ಅಧಿಕಾರಿಗಳ ಬಳಿ ಹೇಳಿಕೊಂಡಿದ್ದರು. ಹೀಗಾಗಿ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಅವರಿಬ್ಬರನ್ನೂ ಕ್ವಾರಂಟೈನ್‌ ಮಾಡಲಾಗಿತ್ತು,’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಮಹಿಳಾ ಪೇದೆಯೊಂದಿಗೆ ಕ್ವಾರಂಟೈನ್‌ ಆಗಿದ್ದ ವ್ಯಕ್ತಿಯು ಮೂರು ದಿನಗಳಾದರೂ ಮನೆಗೆ ಹೋಗದ ಹಿನ್ನೆಲೆಯಲ್ಲಿ ಆತನ ನಿಜವಾದ ಪತ್ನಿ ಆತಂಕಕ್ಕೆ ಒಳಗಾಗಿದ್ದಾರೆ. ಕೊನೆಗೆ ತನ್ನ ಪತಿ ಮಹಿಳಾ ಪೇದೆಯೊಬ್ಬರೊಂದಿಗೆ ಕ್ವಾರಂಟೈನ್‌ ಆಗಿರುವ ವಿಚಾರ ತಿಳಿದ ಮಹಿಳೆ, ಪೊಲೀಸ್‌ ತರಬೇತಿ ಕೇಂದ್ರದ ಬಳಿಗೆ ಬಂದಿದ್ದರು. ಆದರೆ, ಭದ್ರತಾ ಸಿಬ್ಬಂದಿ ಆಕೆಯನ್ನು ಒಳಗೆ ಬಿಟ್ಟಿರಲಿಲ್ಲ. ನಂತರ ಅವರು ಪತಿ ವಿರುದ್ಧ ಬಜಾಜ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಷಯವಾಗಿ ಪೊಲೀಸ್ ಆಯುಕ್ತ ಡಾ.ಭೂಷಣಕುಮಾರ್ ಉಪಾಧ್ಯಾಯ ಅವರನ್ನೂ ಭೇಟಿಯಾಗಿದ್ದರು. ನಂತರ ಪ್ರಕರಣದ ತನಿಖೆಗೆ ಆದೇಶಿಸಲಾಯಿತು,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.