ದೇಶ

ಜನ್ಮದಿನದ ಅಂಗವಾಗಿ ಚಂದ್ರನ ಮೇಲೆ ಜಾಗ ಖರೀದಿಸಿದ ಬೋಧ್ ಗಯಾ ನಿವಾಸಿ

ಜನ್ಮದಿನಾಚರಣೆ ಅಂಗವಾಗಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಆದರೆ ಬೋಧ್ ಗಯಾ ನಿವಾಸಿಯೊಬ್ಬ ಚಂದ್ರನ ಮೇಲೆ ಒಂದು ಎಕರೆಯಷ್ಟು ಜಾಗವನ್ನು ಖರೀದಿಸಿದ್ದಾರೆ.

ಜನ್ಮದಿನದ ಅಂಗವಾಗಿ ಚಂದ್ರನ ಮೇಲೆ ಜಾಗ ಖರೀದಿಸಿದ ಬೋಧ್ ಗಯಾ ನಿವಾಸಿ
ಜನ್ಮದಿನದ ಅಂಗವಾಗಿ ಚಂದ್ರನ ಮೇಲೆ ಜಾಗ ಖರೀದಿಸಿದ ಬೋಧ್ ಗಯಾ ನಿವಾಸಿ
Published On :

ಬೋಧ್ ಗಯಾ: ಜನ್ಮದಿನಾಚರಣೆ ಅಂಗವಾಗಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಆದರೆ ಬೋಧ್ ಗಯಾ ನಿವಾಸಿಯೊಬ್ಬ ಚಂದ್ರನ ಮೇಲೆ ಒಂದು ಎಕರೆಯಷ್ಟು ಜಾಗವನ್ನು ಖರೀದಿಸಿದ್ದಾರೆ. 

ನೀರಜ್ ಕುಮಾರ್ ಚಂದ್ರನ ಮೇಲೆ ಜಾಗ ಖರೀದಿಸಿರುವ ಬೋಧ್ ಗಯಾದ ನಿವಾಸಿಯಾಗಿದ್ದಾರೆ. ಉದ್ಯಮಿಯಾಗಿರುವ ನೀರಜ್ ಕುಮಾರ್ ಈ ಮೂಲಕ ಚಂದ್ರನ ಮೇಲೆ ಜಾಗ ಖರೀದಿಸಿರುವ ಬೋಧ್ ಗಯಾದ ಮೊದಲ ನಿವಾಸಿಯಾಗಿದ್ದಾರೆ.

ನೀರಜ್ ಕುಮಾರ್ ಚಂದ್ರನ ಮೇಲೆ ಹೋಗಲು ಇಚ್ಛಿಸಿದ್ದರು. ಆದರೆ ಅದು ಸಾಧ್ಯವಾಗದ ಕಾರಣ ಚಂದ್ರನ ಮೇಲೆ ಒಂದು ಎಕರೆ ಜಾಗ ಖರೀದಿಸಲು ನಿರ್ಧರಿಸಿದ್ದರು.

ಚಂದ್ರನ ಮೇಲೆ ಜಾಗ ಖರೀದಿಸುವುದಕ್ಕೆ ಹೆಚ್ಚು ಹಣ ಖರ್ಚಾಗಲಿಲ್ಲ. ಆದರೆ ಪ್ರಕ್ರಿಯೆ ಕಷ್ಟವಾಗಿತ್ತು ಎನ್ನುತ್ತಾರೆ ನೀರಜ್ ಕುಮಾರ್.

ಶಾರೂಖ್ ಖಾನ್, ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ಹಲವು ಖ್ಯಾತ ನಾಮರು ಚಂದ್ರನ ಮೇಲೆ ಜಾಗ ಖರೀದಿಸಿದ್ದರು. ಈ ಬಗ್ಗೆ ಮಾಹಿತಿ ಪಡೆಯಲು ನಿರ್ಧರಿಸಿದ್ದೆ. ನನಗೆ ಯುಎಸ್ ಸೊಸೈಟಿ ಲೂನಾ ಸೊಸೈಟಿ ಇಂಟರ್ನ್ಯಾಷನಲ್ ನಿಂದ ಮಾಹಿತಿ ಲಭ್ಯವಾಗಿತ್ತು. ಗೂಗಲ್ ಮೂಲಕ ಇವರನ್ನು ಸಂಪರ್ಕಿಸಿ ಒಂದು ಎಕರೆ ಜಾಗಕ್ಕೆ 2019 ರಲ್ಲಿ ಅರ್ಜಿ ಸಲ್ಲಿಸಿದ್ದೆ. ಆಗ 48,000 ರೂಪಾಯಿ ನೀಡಿದ್ದೆ. ಹಲವು ಪ್ರಕ್ರಿಯೆಗಳ ನಂತರ 2020 ರ ಜು.4 ರಂದು ಮೆಸೇಜ್ ಬಂದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.