ದೇಶ

ಶಮನವಾಗಿಲ್ಲ ಭಿನ್ನಮತ: ಇಂದಿನ ಕಾಂಗ್ರೆಸ್ ಶಾಸಕರ ಸಭೆಗೂ ಸಚಿನ್ ಪೈಲಟ್ ಗೈರು!

ರಾಜಸ್ತಾನ ಕಾಂಗ್ರೆಸ್ ವಲಯದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನವಾದಂತೆ ಕಾಣುತ್ತಿಲ್ಲ. ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೂಡ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಭಾಗವಹಿಸಲಿಲ್ಲ.

ಶಮನವಾಗಿಲ್ಲ ಭಿನ್ನಮತ: ಇಂದಿನ ಕಾಂಗ್ರೆಸ್ ಶಾಸಕರ ಸಭೆಗೂ ಸಚಿನ್ ಪೈಲಟ್ ಗೈರು!
ಸಿಎಂ ಅಶೋಕ್ ಗೆಹ್ಲೊಟ್, ಉಪ ಮುಖ್ಯಮಂತ್ರಿ ಸಚಿನ್ ಪೈಲಟ್(ಸಂಗ್ರಹ ಚಿತ್ರ)
Published On :

ಜೈಪುರ: ರಾಜಸ್ತಾನ ಕಾಂಗ್ರೆಸ್ ವಲಯದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನವಾದಂತೆ ಕಾಣುತ್ತಿಲ್ಲ. ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೂಡ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಭಾಗವಹಿಸಲಿಲ್ಲ.

ಸಚಿನ್ ಪೈಲಟ್ ಅವರಿಗೆ ಕಾಂಗ್ರೆಸ್ ಬಾಗಿಲು ಯಾವಾಗಲೂ ಮುಕ್ತವಾಗಿರುತ್ತದೆ, ಅವರು ವಾಪಾಸ್ ಬರಬೇಕು, ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ನಿನ್ನೆಯ ಸಭೆಯ ಬಳಿಕ ಕಾಂಗ್ರೆಸ್ ನಾಯಕರು ಹೇಳಿದ್ದರು. ಇಂದು ಬೆಳಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ನಿವಾಸದಲ್ಲಿ ಸಭೆ ಆರಂಭಕ್ಕೆ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮತ್ತೊಮ್ಮೆ ಸಚಿವ್ ಪೈಲಟ್ ಅವರಿಗೆ ಮನವಿ ಕಳುಹಿಸಿದ್ದರು.

ಆದರೆ ಇಂದಿನ ಸಭೆಗೆ ಸಚಿನ್ ಪೈಲಟ್ ಜೊತೆಗೆ ಉಳಿದ 18 ಕಾಂಗ್ರೆಸ್ ಶಾಸಕರು ಇಂದಿನ ಸಿಎಲ್ ಪಿ ಸಭೆಗೆ ಹಾಜರಾಗಲಿಲ್ಲ. ಆದರೆ ಸ್ವತಂತ್ರ ಶಾಸಕರು ಇಂದಿನ ಸಭೆಗೆ ಹಾಜರಾಗಿ ಸಿಎಂ ಗೆಹ್ಲೊಟ್ ಗೆ ಬೆಂಬಲ ಸೂಚಿಸಿದ್ದಾರೆ.

ರಾಜಸ್ತಾನ ಕಾಂಗ್ರೆಸ್ ಉಸ್ತುವಾರಿಯಾಗಿರುವ ಸಚಿನ್ ಪೈಲಟ್ ಗೆ ಇಂದಿನ ಸಭೆಗೆ ಹಾಜರಾಗಲು ಎರಡನೇ ಅವಕಾಶವಾಗಿತ್ತು. ಆದರೆ ಅವರು ಮತ್ತು ಅವರ ನಿಕಟವರ್ತಿ ಶಾಸಕರು ಸಭೆಗೆ ಹಾಜರಾಗುವ ಮನಸ್ಸು ತೋರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.