"ಮಾಹಿ ರೀತಿ ಮಾಡಿ": ಮಹೇಂದ್ರ ಸಿಂಗ್ ಧೋನಿ ಜನ್ಮದಿನಾಚರಣೆಗೆ ಮುಂಬೈ ಪೊಲೀಸರಿಂದ ವಿನೂತನ ರೀತಿಯ ಶುಭಾಶಯ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಇಂದು 39 ನೇ ಜನ್ಮದಿನದ ಸಂಭ್ರಮ. ಈ ನಡುವೆ ಇದನ್ನೆ ಕೊರೋನಾ ಕುರಿತ ಜನಜಾಗೃತಿಗೆ ವಿಶಿಷ್ಟವಾಗಿ ಬಳಸಿಕೊಂಡಿರುವ ಮುಂಬೈ ಪೊಲೀಸರು ಮಹೇಂದ್ರ ಸಿಂಗ್ ಧೋನಿಗೆ ವಿನೂತನ ಶೈಲಿಯ ಶುಭಾಶಯ ಕೋರಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಇಂದು 39 ನೇ ಜನ್ಮದಿನದ ಸಂಭ್ರಮ. ಈ ನಡುವೆ ಇದನ್ನೆ ಕೊರೋನಾ ಕುರಿತ ಜನಜಾಗೃತಿಗೆ ವಿಶಿಷ್ಟವಾಗಿ ಬಳಸಿಕೊಂಡಿರುವ ಮುಂಬೈ ಪೊಲೀಸರು ಮಹೇಂದ್ರ ಸಿಂಗ್ ಧೋನಿಗೆ ವಿನೂತನ ಶೈಲಿಯ ಶುಭಾಶಯ ಕೋರಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿರುವ ಪ್ರಾರಂಭಿಕ ಅಕ್ಷರಗಳನ್ನು ಬಳಸಿಕೊಂಡಿರುವ ಮುಂಬೈ ಪೊಲೀಸರು ಕೊರೋನಾ ತಡೆಗೆ ಮುನ್ನೆಚ್ಚರಿಕಾ ಕ್ರಮ MSD-Maintain Social Distancing ಎಂದು ಬರೆದಿದ್ದಾರೆ.
ಮುಂಬೈ ಪೊಲೀಸರ ಟ್ವೀಟ್ ಹ್ಯಾಂಡಲ್ ನಲ್ಲಿ ಮಾಹಿ ರೀತಿ ಮಾಡಿ- ನಾಟ್ ಔಟ್ ಆಗಿರಿ, ಕೂಲ್ ಆಗಿರಿ, ಕೊರೋನಾ ವೈರಸ್ ನ್ನು ಸ್ಟಂಪ್ ಮಾಡಿ ( "Do it the 'Mahi Way' - Stay 'Not Out', Stay Cool & Stump #coronavirus.) ಎಂದು ಬರೆಯಲಾಗಿದೆ.
ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ವೆಸ್ಟ್ ಇಂಡೀಸ್ ನ ಡ್ವೇನ್ ಬ್ರಾವೋ ಧೋನಿಗಾಗಿ ಅವರ ವೃತ್ತಿ ಜೀವನದ ಯಶಸ್ಸುಗಳನ್ನು ತಿಳಿಸುವ ಹೆಲಿಕಾಫ್ಟರ್ 7 ಹಾಡನ್ನು ಡೆಡಿಕೇಟ್ ಮಾಡಿ ಶುಭಾಶಯ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


