ಯಾವುದೇ ದೇಶ ಧ್ವಂಸಗೊಳಿಸಬಲ್ಲ ಶಕ್ತಿ ಹೊಂದಿರುವ ಸಮುದಾಯ ನಮ್ಮದು: ಫೈಜುಲ್ ಹಸನ್
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಅಲ್ಲಲ್ಲಿ ದೇಶ ವಿರೋಧಿ ಘೋಷಣೆಗಳು ಮೊಳಗಿ, ಪ್ರಕರಣ ದಾಖಲಾದ ಬೆನ್ನಲ್ಲೇ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಫೈಜುಲ್ ಹಸನ್ ನಾವು ಯಾವುದೇ ದೇಶವನ್ನು...

ಅಲಿಗಢ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಅಲ್ಲಲ್ಲಿ ದೇಶ ವಿರೋಧಿ ಘೋಷಣೆಗಳು ಮೊಳಗಿ, ಪ್ರಕರಣ ದಾಖಲಾದ ಬೆನ್ನಲ್ಲೇ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಫೈಜುಲ್ ಹಸನ್ ನಾವು ಯಾವುದೇ ದೇಶವನ್ನು ಧ್ವಂಸಗೊಳಿಸಬಲ್ಲ ಶಕ್ತಿ ಹೊಂದಿರುವ ಸಮುದಾಯಕ್ಕೆ ಸೇರಿದವರು ಎಂಬ ಪ್ರಚೋದನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ವಿಶ್ವವಿದ್ಯಾಲಯದ ಹೊರಗಡೆ ನಡೆದ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಜಾರಿಗೊಳಿಸಲು ಹೊರಟಿಸಿರುವ ಅಮಿತ್ ಶಾ ಅವರೇ ಮೊದಲು ನಮ್ಮ ಬಳಿ ಇರುವ ಕಾಗದಪತ್ರಗಳನ್ನು ತೋರಿಸಿ. ಇಲ್ಲಿಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ, ತಾಳ್ಮೆ ನೋಡಬೇಕು ಎಂದರೆ, ಮುಸ್ಲಿಮರ ಕಡೆ ದೃಷ್ಟಿ ಹರಿಸಿ. ಆದರೆ, ನಮ್ಮ ಮನಸ್ಸಿಗೆ ಬಂತೆಂದರೆ ನಾವು ಎಲ್ಲವನ್ನೂ ಧ್ವಂಸ ಮಾಡುತ್ತೇನೆ ನಾವು ಯಾವುದೇ ಧ್ವಂಸಗೊಳಿಸಬಲ್ಲ ಶಕ್ತಿ ಹೊಂದಿರುವ ಸಮುದಾಯಕ್ಕೆ ಸೇರಿದವರು ಎಂದು ಗುಡುಗಿದರು.
ಸಿಎಎ-ಎನ್ಆರ್'ಸಿ ಎಂಬುದು ನಮಗೆ ಮಾತ್ರವಲ್ಲ. ನಮಗೂ ಅನ್ಯವಾಗುತ್ತದೆ. ಎಂದು ನೀವು ಅಧಿಕಾರದಲ್ಲಿದ್ದೀರಿ. ನಾಳೆ ಅಧಿಕಾರ ಕಳದುಕೊಳ್ಲಬಹುದು. ಆಗ ನಾವು ನಿಮಗೆ ಮೊದಲು ದಾಖಲೆ ತೋರಿಸಿ ಎಂದು ಕೇಳುತ್ತೇವೆ ಎಂದು ಲೇವಡಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


