ಗಣರಾಜ್ಯೋತ್ಸವ ದಿನ ಹಾರಾಡಲಿವೆ ಚಿನೂಕ್, ಅಪಾಚೆ ಹೆಲಿಕಾಪ್ಟರ್ ಗಳು
ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ಹೆಲಿಕಾಪ್ಟರ್ ಅಪಾಚೆ ಮತ್ತು ಸಾಗಾಟ ವಿಮಾನ ಚಿನೂಕ್ ಜನವರಿ 26ರಂದು ಗಣರಾಜ್ಯೋತ್ಸವದ ದಿನ ಮೊದಲ ಬಾರಿಗೆ ಹಾರಾಟ ನಡೆಸಲಿದೆ.

ನವದೆಹಲಿ: ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ಹೆಲಿಕಾಪ್ಟರ್ ಅಪಾಚೆ ಮತ್ತು ಸಾಗಾಟ ವಿಮಾನ ಚಿನೂಕ್ ಜನವರಿ 26ರಂದು ಗಣರಾಜ್ಯೋತ್ಸವದ ದಿನ ಮೊದಲ ಬಾರಿಗೆ ಆಕಾಶದಲ್ಲಿ ಹಾರಾಟ ನಡೆಸಿ ತಮ್ಮ ಚಮತ್ಕಾರ ತೋರಿಸಲಿವೆ.
ಚಿನೂಕ್ ನಡಿ ಹೊಸದಾಗಿ ಮೂರು ಸಾಗಾಟ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಿದ್ದು ಅವು ವಿಕ್ ಆಕಾರದಲ್ಲಿ ಹಾರಾಟ ನಡೆಸಲಿವೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಇನ್ನು ಈ ಬಾರಿ ಗಣರಾಜ್ಯೋತ್ಸವದಲ್ಲಿ ಐದು ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಬಾಣದ ಆಕಾರದಲ್ಲಿ ಹಾರಾಟ ನಡೆಸಿ ತಮ್ಮ ಚಮತ್ಕಾರ ತೋರಿಸಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


