ಅನಾಣ್ಯೀಕರಣ ನಂತರ ವಾಯುಪಡೆ 625 ಟನ್ ಹೊಸ ನೋಟುಗಳನ್ನು ಸಾಗಿಸಿತ್ತು: ವಾಯುಪಡೆ ಮಾಜಿ ಮುಖ್ಯಸ್ಥ
2016ರಲ್ಲಿ ನೋಟು ಅನಾಣ್ಯೀಕರಣ ನಂತರ ಭಾರತೀಯ ವಾಯುಪಡೆ 625 ಟನ್ ಗಳಷ್ಟು ಹೊಸ ನೋಟುಗಳನ್ನು ದೇಶದ ವಿವಿಧ ಕಡೆಗಳಿಗೆ ಸಾಗಾಟ ಮಾಡಿದೆ ಎಂದು ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ ಎಸ್ ಧನೋವಾ ಹೇಳಿದ್ದಾರೆ.

ಮುಂಬೈ: 2016ರಲ್ಲಿ ನೋಟು ಅನಾಣ್ಯೀಕರಣ ನಂತರ ಭಾರತೀಯ ವಾಯುಪಡೆ 625 ಟನ್ ಗಳಷ್ಟು ಹೊಸ ನೋಟುಗಳನ್ನು ದೇಶದ ವಿವಿಧ ಕಡೆಗಳಿಗೆ ಸಾಗಾಟ ಮಾಡಿದೆ ಎಂದು ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ ಎಸ್ ಧನೋವಾ ಹೇಳಿದ್ದಾರೆ.
2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು ಸಾವಿರ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದರು.
ಮುಂಬೈಯ ಐಐಟಿ ಆಯೋಜಿಸಿದ್ದ ಟೆಕ್ ಫೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ಅನಾಣ್ಯೀಕರಣಗೊಂಡ ನಂತರ ನಾವು ಹೊಸ ನೋಟುಗಳನ್ನು ಸಾಗಾಟ ಮಾಡಿದೆವು. ಒಂದು ಕೋಟಿ ರೂಪಾಯಿ 20 ಕೆಜಿಯಂತೆ ಆಂತರಿಕ ಸೇವೆಯಾಗಿ ಭಾರತೀಯ ವಾಯುಪಡೆ 625 ಟನ್ ಗಳಷ್ಟು ನೋಟುಗಳನ್ನು ಸಾಗಾಟ ಮಾಡಿದೆವು ಎಂದಿದ್ದಾರೆ.
ಧನೋವಾ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಡಿಸೆಂಬರ್ 31, 2016ರಿಂದ 2019 ಸೆಪ್ಟೆಂಬರ್ 30ರವರೆಗೆ ಸೇವೆ ಸಲ್ಲಿಸಿದ್ದಾರೆ.
ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿನ ವಿವಾದದ ಬಗ್ಗೆ ಮಾತನಾಡಿದ ಅವರು, ಅಂತಹ ವಿವಾದಗಳು ರಕ್ಷಣಾ ಸ್ವಾಧೀನಗಳನ್ನು ನಿಧಾನಗೊಳಿಸುತ್ತವೆ, ಇದು ಸಶಸ್ತ್ರ ಪಡೆಗಳ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಬೋಫೋರ್ಸ್ ಗನ್ ಗಳು ಚೆನ್ನಾಗಿದ್ದರೂ ಕೂಡ ರಾಜೀವ್ ಗಾಂಧಿ ಸರ್ಕಾರದಲ್ಲಿ ಕೂಡ ಬೋಫೋರ್ಸ್ ಹಗರಣ ವಿವಾದಕ್ಕೆಡೆ ಮಾಡಿಕೊಟ್ಟಿತ್ತು ಎಂದರು.
ಬಾಲಾಕೋಟ್ ವಾಯುದಾಳಿ ನಂತರ ಭಾರತ-ಪಾಕಿಸ್ತಾನ ನಿಲುವಿನ ಸಮಯದಲ್ಲಿ ಮಿಗ್ 21 ಬದಲಿಗೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರಫೆಲ್ ಯುದ್ಧ ವಿಮಾನ ಹಾರಾಟ ನಡೆಸಿದ್ದರೆ ಪರಿಸ್ಥಿತಿ ಬೇರೆಯೇ ಆಗಿತ್ತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


