'ನನ್ನ ಜೀವ ಅಪಾಯದಲ್ಲಿದೆ' ಐಬಿ ಅಧಿಕಾರಿ ಕೊಲೆಗೆ ಕುಮ್ಮಕ್ಕು ಆರೋಪ ಎದುರಿಸುತ್ತಿರುವ 'ಎಎಪಿ'ಯ ತಾಹೀರ್ ಹುಸೇನ್!
ದೆಹಲಿಯಲ್ಲಿನ ಹಿಂಸಾಚಾರದಲ್ಲಿ ಭಾಗಿ ಹಾಗೂ ಐಬಿ ಅಧಿಕಾರಿ ಅಂಕಿತ್ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡ ತಾಹೀರ್ ಹುಸೇನ್ ಇದೀಗ ತಮ್ಮ ಜೀವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ.

ನವದೆಹಲಿ: ದೆಹಲಿಯಲ್ಲಿನ ಹಿಂಸಾಚಾರದಲ್ಲಿ ಭಾಗಿ ಹಾಗೂ ಐಬಿ ಅಧಿಕಾರಿ ಅಂಕಿತ್ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡ ತಾಹೀರ್ ಹುಸೇನ್ ಇದೀಗ ತಮ್ಮ ಜೀವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ನಿರಾಕರಿಸಿರುವ ಅವರು ನಾನು ಯಾವುದೇ ಹಿಂಸಾಚಾರಕ್ಕೆ ಉತ್ತೇಜನ ನೀಡಿರಲಿಲ್ಲ. ವಿನಾಃಕಾರಣ ನನ್ನನ್ನು ಸಿಕ್ಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತಾಹೀರ್ ಹುಸೇನ್ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಮತ್ತು ಕಲ್ಲುಗಳ ರಾಶಿ ಪತ್ತೆಯಾಗಿದ್ದು ಗಲಭೆಕೋರರು ಹುಸೇನ್ ಮನೆಯ ಮೇಲಿಂದಲೇ ದಾಳಿ ಮಾಡುತ್ತಿದ್ದರು. ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿರುವ ಗಲಭೆಯಲ್ಲಿ ದುಷ್ಕರ್ಮಿಗಳು ಇದೇ ಮನೆಯಿಂದ ಪೆಟ್ರೋಲ್ ಬಾಂಬ್, ಕಲ್ಲು, ಬಾಟಲ್ ತೂರಾಟ ಮಾಡುತ್ತಿದ್ದರು. ಎನ್ನಲಾಗಿದೆ.
ಅಲ್ಲದೆ ಗಲಭೆ ವೇಳೆ ಚಾಂದ್ ಬಾಗ್ ನಲ್ಲಿ ಐಟಿ ಅಧಿಕಾರಿ ಅಂಕಿತ್ ಶರ್ಮಾ ಬರ್ಬರ ಹತ್ಯೆ ಹಿಂದೆ ಆಪ್ ನಾಯಕನ ಕೈವಾಡ ಇದೆ. ಹಾಗೂ ಗಲಭೆಕೋರರಿಗೆ ತಾಹೀರ್ ಹುಸೇನ್ ನೆರವು ನೀಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


