ದೇಶ

ಡೊನಾಲ್ಡ್ ಟ್ರಂಪ್ ದಂಪತಿಗೆ ಏರ್ಪಡಿಸಿದ್ದ ಔತಣಕೂಟದ ಮೆನುವಿನಲ್ಲಿನ ಏನೇನು ಖಾದ್ಯಗಳಿದ್ದವು?

ಕಳೆದ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿ ಅತಿಥಿಗಳಿಗೆ ಔತಣಕೂಟ ಏರ್ಪಡಿಸಿದ್ದರು.

ಡೊನಾಲ್ಡ್ ಟ್ರಂಪ್ ದಂಪತಿಗೆ ಏರ್ಪಡಿಸಿದ್ದ ಔತಣಕೂಟದ ಮೆನುವಿನಲ್ಲಿನ ಏನೇನು ಖಾದ್ಯಗಳಿದ್ದವು?
Published On :

ನವದೆಹಲಿ: ಕಳೆದ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿ ಅತಿಥಿಗಳಿಗೆ ಔತಣಕೂಟ ಏರ್ಪಡಿಸಿದ್ದರು.


ಔತಣಕೂಟದಲ್ಲಿ ಮೆನುಗಳ ಪಟ್ಟಿಯಲ್ಲಿ, ಸಸ್ಯಾಹಾರ ವಿಭಾಗದಲ್ಲಿ ಕಿತ್ತಳೆ ಹಣ್ಣಿನ ಮೇಲ್ಬಾಗ ಸಿಪ್ಪೆ ತೆಗೆದು ಮಾಡಿದ ತಿನಿಸು, ನಿಂಬೆಹಣ್ಣು ಮತ್ತು ಕೊತ್ತಂಬರಿ ಸೊಪ್ಪಿನ ಶರಬತ್ತು, ಭಾರತದ ಪ್ರಮುಖ ತಿನಿಸುಗಳಾದ ದಾಲ್ ರೈಸಿನಾ, ತರಕಾರಿಗಳಿಂದ ಸಿದ್ದಪಡಿಸಿದ ಡೆಗ್ ಕಿ ಬಿರಿಯಾನಿ, ಮಿಸ್ಸಿ ರೋಟಿ, ನಾನ್, ತಂದೂರಿ ರೋಟಿ, ಮೇಥಿ ಕುಲ್ಚಾ ಸೇರಿದಂತೆ ಸೂಪ್, ಸ್ನಾಕ್ಸ್ ಮತ್ತು ಹಣ್ಣುಗಳಿದ್ದವು. 


ಇನ್ನು ಡೊನಾಲ್ಡ್ ಟ್ರಂಪ್ ಅವರು ಮಾಂಸಪ್ರಿಯರು, ಹೀಗಾಗಿ ಔತಣಕೂಟದಲ್ಲಿ ಮಾಂಸ ಖಾದ್ಯಗಳನ್ನು ಸಹ ಪ್ರತ್ಯೇಕವಾಗಿ ಇರಿಸಲಾಗಿತ್ತು. ಮಾಂಸಹಾರಕ್ಕೆ ಅಮೆರಿಕದ ತಿನಿಸಿನ ಸ್ಪರ್ಶವನ್ನು ಸಹ ನೀಡಿದ್ದು ವಿಶೇಷವಾಗಿತ್ತು. ದಮ್ ಗೋಶ್ತ್ ಬಿರಿಯಾನಿ, ನಾನ್, ತಂದೂರಿ ರೋಟಿಗಳಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.