ಪತ್ನಿ, ಪುತ್ರನೊಂದಿಗೆ ನ್ಯಾಯಾಲಯಕ್ಕೆ ಶರಣಾದ ಸಂಸದ ಅಜಮ್ ಖಾನ್
ಸಮಾಜವಾದಿ ಪಕ್ಷದ ಸಂಸದ ಮೊಹಮ್ಮದ್ ಅಜಮ್ ಖಾನ್, ಅವರ ಪತ್ನಿ ತಂಜೀನ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಆಜಮ್ ಅವರುಗಳು ಬುಧವಾರ ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಶರನಾಗಿದ್ದಾರೆ. ಆ ಬಳಿಕ ಅವರನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದಿನ ವಿಚಾರಣೆ ಮಾರ್ಚ್ 2 ರಂದು ನಡೆಯಲಿದೆ.

ರಾಂಪುರ್(ಉತ್ತರಪ್ರದೇಶ): ಸಮಾಜವಾದಿ ಪಕ್ಷದ ಸಂಸದ ಮೊಹಮ್ಮದ್ ಅಜಮ್ ಖಾನ್, ಅವರ ಪತ್ನಿ ತಂಜೀನ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಆಜಮ್ ಅವರುಗಳು ಬುಧವಾರ ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಶರನಾಗಿದ್ದಾರೆ. ಆ ಬಳಿಕ ಅವರನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದಿನ ವಿಚಾರಣೆ ಮಾರ್ಚ್ 2 ರಂದು ನಡೆಯಲಿದೆ.
ಖಾನ್ ಕುಟುಂಬದ ವಿರುದ್ಧ ನ್ಯಾಯಾಲಯವು ವಿವಿಧ ಪ್ರಕರಣಗಳಲ್ಲಿ ಸಲ್ಲಿಸಿದ್ದ ಸಮನ್ಸ್ ಗಳನ್ನು ನಿರ್ಲಕ್ಷಿಸಿತ್ತು.ಇದರ ಪರಿಣಾಮವಾಗಿ ಅವರ ವಿರುದ್ಧ ಕುಟುಂಬದ ವಿರುದ್ಧ ವಾರಂಟ್ ಜಾರಿಯಾಗಿತ್ತು.
ರಾಂಪುರದ ಸ್ಥಳೀಯ ಸಂಸದರ-ಶಾಸಕರ ವಿಶೇಷ ನ್ಯಾಯಾಲಯ ಮೊಹಮ್ಮದ್ ಅಜಮ್ ಖಾನ್, ತಂಜೀನ್ ಫಾತಿಮಾ ಮತ್ತು ಅಬ್ದುಲ್ಲಾ ಆಜಮ್ ಅವರ ಆಸ್ತಿಗಳನ್ನು ಲಗತ್ತಿಸಲು ಮಂಗಳವಾರ ಆದೇಶಿಸಿತ್ತು. ಸಮಾಜವಾದಿ ನಾಯಕಜಾಮೀನು ಪಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿದರೂ ಸಹ ಅದು ಸಫಲವಾಗಿರಲಿಲ್ಲ.
ಕಳೆದ ವರ್ಷ ಜುಲೈನಲ್ಲಿ ಅಜಮ್ ಖಾನ್ ಗೆ ಸಂಕಷ್ಟಗಳು ಪ್ರಾರಂಬವಾಗಿದ್ದವು. ಅವರ ಮತ್ತು ಅವರ ಕುಟುಂಬದ ವಿರುದ್ಧ 4 ಕ್ಕೂ ಹೆಚ್ಚು ಪ್ರಕರಣಗಳುದಾಕಲಾಗಿದೆ.
ಭೂ ಕಬಳಿಕೆ, ಅತಿಕ್ರಮಣ, ಪುಸ್ತಕ ಕಳ್ಳತನ, ವಿದ್ಯುತ್ ಕಳ್ಳತನ, ಪ್ರತಿಮೆ ಕಳ್ಳತನ, ಎಮ್ಮೆ ಕಳ್ಳತನ, ಮೇಕೆ ಕಳ್ಳತನಕ್ಕಾಗಿ ಸಂಸದರ ವಿರುದ್ಧ ಪ್ರಕರಣ ದಾಖಲಾಗಿದೆ. ಅವರ ಪುತ್ರ ಅಬ್ದುಲ್ಲಾ ಆಜಮ್ ವಿರುದ್ಧ ಜನ್ಮ ದಿನಾಂಕದ ದಾಖಲೆಗ ನಕಲಿ ಮಾಡಿದ ಪ್ರಕರಣವಿದೆ. ಖೋಟಾ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ನಂತರ ಅವರು ರಾಜ್ಯ ವಿಧಾನಸಭೆಯ ಸದಸ್ಯತ್ವವನ್ನು ಸಹ ಕಳೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


