ಸಬರ್ ಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಬರೆದಿದ್ದು ಹಲವರ ಹುಬ್ಬೇರಿಸಿದೆ ಏಕೆ ಗೊತ್ತೇ?
ಅಮೆರಿಕದಿಂದ ಗುಜರಾತ್ ಗೆ ಬಂದಿಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾತ್ಮಾ ಗಾಂಧಿ ಅವರ ಸಬರ್ ಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.

ಅಹಮದಾಬಾದ್: ಅಮೆರಿಕದಿಂದ ಗುಜರಾತ್ ಗೆ ಬಂದಿಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾತ್ಮಾ ಗಾಂಧಿ ಅವರ ಸಬರ್ ಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.
ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಬರೆದಿರುವ ಸಾಲುಗಳು ಅನೇಕರು ಹುಬ್ಬೇರಿಸುವಂತೆ ಮಾಡಿದೆ. ಟ್ವಿಟರ್ ನಲ್ಲಿ ಈ ಬಗ್ಗೆ ಸಾಕಷ್ಟು ಟ್ವೀಟ್ ಗಳು ಬಂದಿದೆ. ಸಬರ್ ಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಬರೆಯುವಾಗ ಟ್ರಂಪ್ ಮಹಾತ್ಮ ಗಾಂಧಿ ಅವರನ್ನೇ ಮರೆತಿದ್ದಾರೆ ಎಂಬುದು ಅಚ್ಚರಿಗೆ ಕಾರಣವಾಗಿರುವ ಅಂಶ.
ನನ್ನ ಪ್ರಿಯ ಮಿತ್ರ ನರೇಂದ್ರ ಮೋದಿ, ಈ ಅತ್ಯದ್ಭುತ ಭೇಟಿಗಾಗಿ ಧನ್ಯವಾದಗಳು ಎಂದಷ್ಟೇ ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ನೆಟ್ಟಿಗರು ಟ್ರಂಪ್ ಮಹಾತ್ಮಾ ಗಾಂಧಿ ಅವರನ್ನೇ ಮರೆತಿದ್ದಾರೆ. 2010 ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಮುಂಬೈ ನಲ್ಲಿದ್ದ ಗಾಂಧಿ ಅವರು ಇರುತ್ತಿದ್ದ ಮಣಿ ಭವನಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಅವರನ್ನು ಸ್ಮರಿಸಿದ್ದರು.
2015 ರಲ್ಲಿ ರಾಜ್ ಘಾಟ್ ಗೆ ಭೇಟಿ ನೀಡಿದ್ದಾಗಲೂ ಸಹ ಬರಾಕ್ ಒಬಾಮ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಅವರನ್ನು ಸ್ಮರಿಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಮಾತ್ರ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಅವರನ್ನು ಮರೆತಿದ್ದು ಟ್ವೀಟಿಗರ ಟೀಕೆಗೆ ಗುರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


