ಒಂಟಿ ಸಲಗ ದಾಳಿಗೆ ಮೂವರು ಬಲಿ
ಒಡಿಶಾದ ನಿಮಾಪರಾ, ಬಲಂಗಾ ಮತ್ತು ಪಿಪಿಲಿ ಪ್ರದೇಶಳಲ್ಲಿ ಶನಿವಾರ ಸಂಜೆ ಸಲಗ ಕಾಲ್ತುಳಿತದಿಂದ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ.

ಪುರಿ: ಒಡಿಶಾದ ನಿಮಾಪರಾ, ಬಲಂಗಾ ಮತ್ತು ಪಿಪಿಲಿ ಪ್ರದೇಶಳಲ್ಲಿ ಶನಿವಾರ ಸಂಜೆ ಸಲಗ ಕಾಲ್ತುಳಿತದಿಂದ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ.
ಬಲಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗೋಪಿನಾಥಪುರ ಗ್ರಾಮದಲ್ಲಿ ಏಕಾಏಕಿ ಸಲಗ ಕಾಣಿಸಿಕೊಂಡು ಜುಗಲ್ ಭಟ್ ಎಂಬ ವ್ಯಕ್ತಿಯನ್ನು ತುಳಿದು ಸಾಯಿಸಿದೆ. ನಂತರ ಪಿಪಿಲಿ ಪ್ರದೇಶಕ್ಕೆ ನುಗ್ಗಿದ ಸಲಗ, ಚಂದ್ರಾದಿಪುರ ಗ್ರಾಮದ ಮಕರ್ ಪ್ಯಾಲೆ ಮತ್ತು ಚೈತನ್ಯ ಸಾಹು ಎಂಬುವವರ ಮೇಲೆ ದಾಳಿ ಮಾಡಿ ತುಳಿದು ಸಾಯಿಸಿದೆ.
ನಿಮಾಪಾರದಲ್ಲಿನ ವಿವಿಧ ಸ್ಥಳಗಳಲ್ಲಿ ಸಲಗ ಇತರ ಆರು ಜನರ ಮೇಲೆ ದಾಳಿ ಮಾಡಿದೆ. ಆದರೆ ಅದೃಷ್ಟವಶಾತ್ ಅವರೆಲ್ಲರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


