ದೇಶ

ಉತ್ತರ ಪ್ರದೇಶ ಸೋನಭದ್ರದಲ್ಲಿ ಪತ್ತೆಯಾಗಿರೋ ಚಿನ್ನದ ನಿಕ್ಷೇಪ 3000 ಟನ್ ಅಲ್ಲ! 

ಉತ್ತರ ಪ್ರದೇಶದ ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಸೋನಭದ್ರದಲ್ಲಿ 3000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಿದ ಬೆನ್ನಲ್ಲೇ ಭಾರತದ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಸ್ಪಷ್ಟನೆ ನೀಡಿದ್ದು ಇಂತಹ ಯಾವುದೇ ನಿಕ್ಷೇಪ ಪತ್ತೆಯಾಗಿಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶ ಸೋನಭದ್ರದಲ್ಲಿ ಪತ್ತೆಯಾಗಿರೋ ಚಿನ್ನದ ನಿಕ್ಷೇಪ 3000 ಟನ್ ಅಲ್ಲ! 
ಉತ್ತರ ಪ್ರದೇಶ ಸೋನಭದ್ರದಲ್ಲಿ ಪತ್ತೆಯಾಗಿರೋ ಚಿನ್ನದ ನಿಕ್ಷೇಪ 3000 ಟನ್ ಅಲ್ಲ!
Published On :

ಲಖನೌ: ಉತ್ತರ ಪ್ರದೇಶದ ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಸೋನಭದ್ರದಲ್ಲಿ 3000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಿದ ಬೆನ್ನಲ್ಲೇ ಭಾರತದ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಸ್ಪಷ್ಟನೆ ನೀಡಿದ್ದು ಇಂತಹ ಯಾವುದೇ ನಿಕ್ಷೇಪ ಪತ್ತೆಯಾಗಿಲ್ಲ ಎಂದು ಹೇಳಿದೆ.

ಸೋನಾಭದ್ರದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರುವ ಪ್ರದೇಶದಿಂದ ಗರಿಷ್ಠ ಎಂದರೆ 160 ಕೆ.ಜಿ ಚಿನ್ನವನ್ನಷ್ಟೇ ಹೊರಪಡೆಯಬಹುದಾಗಿದೆ ಎಂದು ಜಿಎಸ್ಐ ಹೇಳಿದೆ. 

ಚಿನ್ನದ ನಿಕ್ಷೇಪಕ್ಕಾಗಿ ಜಿಎಸ್ ಐ ಹುಡುಕಾಟ ನಡೆಸಿದೆ. ಆದರೆ ಉತ್ತರ ಪ್ರದೇಶದ ಸೋನಭದ್ರದಲ್ಲಿ ಜಿಲ್ಲಾ ಗಣಿಗಾರಿಕೆ ಇಲಾಖೆ ಹೇಳಿದಂತೆ 3000 ಟನ್ ಚಿನ್ನ ನಿಕ್ಷೇಪಗಳನ್ನು ಜಿಎಸ್ ಐ ಪತ್ತೆ ಮಾಡಿಲ್ಲ. ಅಲ್ಲಿ ಕಂಡು ಬಂದಿರುವ ಅದಿರಿನಿಂದ ಗರಿಷ್ಠ 160 ಕೆ.ಜಿ ಚಿನ್ನ ತೆಗೆಯಬಹುದಷ್ಟೇ ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.