ಭಾರತದ ಮೊದಲ ಕೊರೋನಾವೈರಸ್ ಪೀಡಿತೆ ಆಸ್ಪತ್ರೆಯಿಂದ ಡಿಸ್ಚಾರ್ಜ್
ಭಾರತದ ಮೊದಲ ನೋವೆಲ್ ಕೊರೋನಾವೈರಸ್ ರೋಗಿಯು ಗುರುವಾರ ಆಸ್ಪ್ತರೆಯಿಂದ ಬಿಡುಗಡೆಯಾಗಿದ್ದಾರೆ. ತ್ರಿಶೂರ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿಯನ್ನು ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ತ್ರಿಶೂರ್: ಭಾರತದ ಮೊದಲ ನೋವೆಲ್ ಕೊರೋನಾವೈರಸ್ ರೋಗಿಯು ಗುರುವಾರ ಆಸ್ಪ್ತರೆಯಿಂದ ಬಿಡುಗಡೆಯಾಗಿದ್ದಾರೆ. ತ್ರಿಶೂರ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿಯನ್ನು ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿರ್ಧಾರವನ್ನು ವೈದ್ಯಕೀಯ ಮಂಡಳಿಯು ತೆಗೆದುಕೊಂಡಿದ್ದು, ಎರಡನೇ ಬಾರಿಗೆ ಸೋಂಕು ಪರೀಕ್ಷೆ ಮಾಡಿದಾಗಲೂ ನೆಗೆಟಿವ್ ವರದಿ ಬಂದಿದೆ. ಹಾಗಾಗಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.
ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ವಿಭಾಗದ ರಾಜ್ಯ ನೋಡಲ್ ಅಧಿಕಾರಿ ಡಾ.ಅಮರ್ ಫೆಟ್ಟೈಲ್, ಮಾತನಾಡಿ ಕೊರೋನಾವೈರಸ್ ತಗುಲಿದ್ದ ಭಾರತದ ಮೊದಲ ರೋಗಿಯನ್ನು ಬಿಡುಗಡೆ ಮಾಡಲಾಗಿದೆ. ರೋಗಿಯು ಇನ್ನೂ 14 ದಿನಗಳ ಹೋಂ ಐಸೋಲೇಷನ್ ಗೆ ಒಳಗಾಗಬೇಕಿದೆ. ಕೊರೋನಾವೈರಸ್ ತಗುಲಿರುವುದು ಸಾಬೀತಾಗಿದ್ದ ಮೂವರನ್ನೂ ಇದೀಗ ಆಸ್ಪತ್ರೆಯಿಂಡ ಬಿಡುಗಡೆಗೊಳಿಸಲಾಗಿದೆ" ಎಂದರು.
ವಿದ್ಯಾರ್ಥಿಯ ಬಿಡುಗಡೆ ಕೇರಳದಿಂದ ವರದಿಯಾದ ಭಾರತದಲ್ಲಿ ಸೋಂಕಿನ ಎಲ್ಲಾ ಮೂರು ಪ್ರಕರಣಗಳ ಚೇತರಿಕೆಗೆ ಕಾರಣವಾಗಿದೆ. ವೈರಸ್ ಸೋಂಕಿಗೆ ಒಳಗಾದ ಹೊಸದರಲ್ಲಿ ಇತರ ಇಬ್ಬರು ವಿದ್ಯಾರ್ಥಿಗಳು - ಅಳಪ್ಪುಳ ಹಾಗೂ ಕಾಸರಗೋಡಿನವರಾಗಿದ್ದರು. ಇತ್ತೀಚಿನ ಪರೀಕ್ಷೆಗಳನ್ನು ಸೋಂಕು ವರದಿ ನೆಗೆಟಿವ್ ಎಂದು ಬಂದ ಬಳಿಕ ಅವರನ್ನು ಸಹ ಡಿಸ್ಚಾರ್ಜ್ ಮಾಡಲಾಗಿತ್ತು.
ಭಾರತದ ಮೊದಲಕೊರೋನಾವೈರಸ್ ಸೋಂಕಿತಳಾಗಿದ್ದ ಮಹಿಳಾ ರೋಗಿ ಕಳೆದ ತಿಂಗಳು ಚೀನಾದ ವುಹಾನ್ ನಿಂದ ಹಿಂದಿರುಗಿದಾಗಿನಿಂದ ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚೀನಾದಲ್ಲಿ ಇದುವರೆಗೆ ಮಾರಣಾಂತಿಕ ಕಾಯಿಲೆಯಿಂದಾಗಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


