ಕರೋನಾ ವೈರಸ್: ಪ್ರತ್ಯೇಕವಾಗಿ ಇರಿಸಿದರೂ ಪುಣೆ ವೈದ್ಯರ ಸಹಾಯಕ್ಕೆ ಮನಸೋತ ಚೀನಾ ಪ್ರಜೆ!
ಕರೋನಾ ವೈರಸ್ ಸೋಂಕು ತಗುಲಿರುವ ಲಕ್ಷಣ ಕಾಣಿಸಿಕೊಂಡಿದ್ದ ಚೀನಾ ಪ್ರಜೆಯೊಬ್ಬರು ಭಾರತೀಯ ವೈದ್ಯರ ಸಹಾಯಕ್ಕೆ ಮನಸೋತು ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.

ಪುಣೆ: ಕರೋನಾ ವೈರಸ್ ಸೋಂಕು ತಗುಲಿರುವ ಲಕ್ಷಣ ಕಾಣಿಸಿಕೊಂಡಿದ್ದ ಚೀನಾ ಪ್ರಜೆಯೊಬ್ಬರು ಭಾರತೀಯ ವೈದ್ಯರ ಸಹಾಯಕ್ಕೆ ಮನಸೋತು ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಚೀನಾ ಪ್ರಜೆಯನ್ನು ಪುಣೆಯ ನಾಯ್ಡು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು. ಈ ಬಗ್ಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಟ್ವೀಟ್ ಮಾಡಿದ್ದು: ಎಲ್ಲರ ಆರೈಕೆ!! ಕರೋನಾ ವೈರಸ್ (2019-nCoV) ರೋಗಲಕ್ಷಣಗಳಿದ್ದ ಚೀನಾ ಪ್ರಜೆಯೊಬ್ಬರನ್ನು ಪುಣೆಯಲ್ಲಿರುವ ನಾಯ್ಡು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು. ಇದು ಚೀನಾ ಪ್ರಜೆಯೊಬ್ಬರ ಅಂತರಂಗ ಎಂದು ಆ ವ್ಯಕ್ತಿ ಬರೆದಿದ್ದ ಪತ್ರವನ್ನೂ ಟ್ಯಾಗ್ ಮಾಡಿದೆ.
ಆ ಪತ್ರ ಹೀಗಿತ್ತು: ಇಲ್ಲಿಗೆ ನನ್ನನ್ನು ಏಕಾ ಏಕಿ ಕಳುಹಿಸಲಾಗಿತ್ತು. ಸೌಲಭ್ಯ ಹಾಗು ಭಾಷಾ ಸಮಸ್ಯೆಗಳ ಕಾರಣದಿಂದಾಗಿ ಸ್ವಲ್ಪ ಭಯವಾಗಿತ್ತು. ಆದರೆ ಚೀನಾ ಜನತೆಗೆ ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ಸಹಕಾರಿಯಾಗಿದ್ದರು. ಆಹಾರ, ಸ್ವಚ್ಛತೆ ಎಲ್ಲಾ ಅಂಶಗಳನ್ನೂ ಉತ್ತಮವಾಗಿ ನಿರ್ವಹಣೆ ಮಾಡಲಾಗಿತ್ತು ಎಂದು ಆಸ್ಪತ್ರೆಯ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


