ಬ್ಯಾಂಕ್ ಲೋನ್ ಪಡೆಯಲು ಹೋಗುವಾಗ ಖರೀದಿಸಿದ ಲಾಟರಿಗೆ ಬಂತು 12 ಕೋಟಿ ರು!
ಹಿಂದೆ ಮಾಡಿದ್ದ ಮೂರು ಸಾಲ ಇನ್ನೂ ತೀರಿಸಿರಲಿಲ್ಲ, ಹೀಗಿದ್ದರೂ ನಾಲ್ಕನೇ ಬಾರಿಗೆ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿಗೆ ತಿಳಿದಿರಲಿಲ್ಲ, ಅತಿ ಶೀಘ್ರದಲ್ಲಿಯೇ ನಾನು ಕೋಟ್ಯಾಧಿಪತಿ ಆಗುತ್ತೇನೆಂದು, ಆತ ಎಣಿಸಿರಲಿಲ್ಲ

ಕಣ್ಣೂರು: ಹಿಂದೆ ಮಾಡಿದ್ದ ಮೂರು ಸಾಲ ಇನ್ನೂ ತೀರಿಸಿರಲಿಲ್ಲ, ಹೀಗಿದ್ದರೂ ನಾಲ್ಕನೇ ಬಾರಿಗೆ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿಗೆ ತಿಳಿದಿರಲಿಲ್ಲ, ಅತಿ ಶೀಘ್ರದಲ್ಲಿಯೇ ನಾನು ಕೋಟ್ಯಾಧಿಪತಿ ಆಗುತ್ತೇನೆಂದು, ಆತ ಎಣಿಸಿರಲಿಲ್ಲ.
ಕೇರಳದ ಕುರುಚಿಯಾ ರಾಜನ್ ಅವರಿಗೆ 12 ಕೋಟಿ ರು ಲಾಟರಿ ಹಣ ಬಂದಿದೆ, ತಮ್ಮ ಮನೆಯ ನಿರ್ಮಾಣ ಕೆಲಸ ಅ ರ್ಧಕ್ಕೆ ನಿಂತಿತ್ತು, ಇದರಿಂದ ರಾಜನ್ ತೀವ್ರ ಅಸಮಾಧಾನ ಗೊಂಡಿದ್ದರು. ಮಗಳ ಮದುವೆಗೂ ಕೂಡ ಸಾಲ ಮಾಡಿದ್ದರು, ಹೀಗಾಗಿ 4ನೇ ಬಾರಿಗೆ ಬ್ಯಾಂಕ್ ನಲ್ಲಿ ಸಾಲ ಮಾಡಲು ಹೊರಟಿದ್ದರು. ಹೊರಡುವ ಮುನ್ನ 300 ರೂ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಅದನ್ನು ಯಾರೋಂದಿಗೂ ಹೇಳಿರಲಿಲ್ಲ.
ಯಾವಾಗಲೂ ಯಾಟರಿ ಖರೀದಿ ಮಾಡುತ್ತಿದ್ದರಿಂದ ನನ್ನ ಹೆಂಡತಿ ನನ್ನ ಜೊತೆ ಜಗಳವಾಡುತ್ತಿದ್ದಳು. ಮಂಗಳವಾರ ಬೆಳಗ್ಗೆ ಕುತೂಹಲದಿಂದ ನೋಡಿದೆ, ಆಗ ತಿಳಿಯಿತು ನನ್ನ ಬದುಕಿನ ಗತಿಯೇ ಬದಲಾಯಿತು ಎಂದು ರಾಜನ್ ತಿಳಿಸಿದ್ದಾರೆ.
ಇನ್ನೂ ಲಾಟರಿಯಿಂದ ಹಣ ಬಂದಿದ್ದರಿಂದ ನನಗೆ ಅಪಾರ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರು ಸಂತೋಷ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


