ಏಪ್ರಿಲ್‌ನಲ್ಲಿ ನೂತನ ಪಕ್ಷ ಪ್ರಾರಂಭಿಸಲಿರುವ ಸೂಪರ್ ಸ್ಟಾರ್ ರಜನಿಕಾಂತ್
ದಕ್ಷೀಣ ಭಾರತ ಚಿತ್ರರಂಗದ ಮೇರುನಟ ರಜನಿಕಾಂತ್ ಏಪ್ರಿಲ್‌ನಲ್ಲಿ ತಮ್ಮ ನೂತನ ಪಕ್ಷವನ್ನು ಸ್ಥಾಪನೆ ಮಾಡಲಿದ್ದಾರೆ. ಡಿಸೆಂಬರ್ 31, 2017 ರಂದು ರಜಿನಿ ಮಕ್ಕಳ್ ಮಂದ್ರಮ್ ನ ಘೋಷಣೆಯಾದ ಸುಮಾರು ಎರಡು ವರ್ಷಗಳ ನಂತರ ನಟ ಹಾಗೂ ಅವರ ನಿಕಟವರ್ತಿಗಳು ಏಪ್ರಿಲ್ ಗೆ ನೂತನ ಪಕ್ಷ ಪ್ರಾರಂಭಿಸುವುದಾಗಿ ಖಚಿತಪಡಿಸಿದ್ದಾರೆ.

ದಕ್ಷೀಣ ಭಾರತ ಚಿತ್ರರಂಗದ ಮೇರುನಟ ರಜನಿಕಾಂತ್ ಏಪ್ರಿಲ್‌ನಲ್ಲಿ ತಮ್ಮ ನೂತನ ಪಕ್ಷವನ್ನು ಸ್ಥಾಪನೆ ಮಾಡಲಿದ್ದಾರೆ. ಡಿಸೆಂಬರ್ 31, 2017 ರಂದು ರಜಿನಿ ಮಕ್ಕಳ್ ಮಂದ್ರಮ್ ನ ಘೋಷಣೆಯಾದ ಸುಮಾರು ಎರಡು ವರ್ಷಗಳ ನಂತರ ನಟ ಹಾಗೂ ಅವರ ನಿಕಟವರ್ತಿಗಳು ಏಪ್ರಿಲ್ ಗೆ ನೂತನ ಪಕ್ಷ ಪ್ರಾರಂಭಿಸುವುದಾಗಿ ಖಚಿತಪಡಿಸಿದ್ದಾರೆ.
ಇನ್ನೂ ಪಕ್ಷದ ಹೆಸರು ಘೋಷಣೆಯಾಗಿಲ್ಲವಾದರೂ ರಜಿನಿ ಮಕ್ಕಳ್ ಮಂದ್ರಮ್ ನ ಉನ್ನತ ಪದಾಧಿಕಾರಿ ಹೇಳಿದಂತೆ ಏಪ್ರಿಲ್ 14 ರ ನಂತರ ಯಾವುದೇ ಸಮಯದಲ್ಲಿ ಪಕ್ಷದ ಘೋಷಣೆಯಾಗುವ ಸಾಧ್ಯತೆ ಇದೆ.
ರಜನಿಕಾಂತ್ ರಾಜಕೀಯವಾಗಿ ಬಿಜೆಪಿಯತ್ತ ವಾಲುತ್ತಿದ್ದಾರೆ ಮತ್ತು ಚೆನ್ನೈ ಮೂಲದ ಆರ್‌ಎಸ್‌ಎಸ್ ಮುಖಂಡ ಎಸ್ ಗುರುಮೂರ್ತಿಯಿಂದ ಪ್ರಭಾವಿತರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು ತಮಿಳಾರುವಿ ಮಣಿಯನ್ ರಾಜಕೀಯ ತಂತ್ರಮತ್ತು ದಿನನಿತ್ಯದ ವ್ಯವಹಾರಗಳಲ್ಲಿ ನಟನಿಗೆ ಮಾರ್ಗದರ್ಶಕನ ಮಾಡುತ್ತಿದೆ ಎನ್ನಲಾಗಿದೆ.
ರಜನಿಕಾಂತ್ ಅವರ ಸಮೀಪವರ್ತಿಗಳ ಹೇಳಿಕೆಯಂತೆ ನಟನು ಈ ಬಗೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಲಲು ಬಿಜೆಪಿ ಖಚಿತವಾಗಿ ಸಹಾಯ ಮಾಡಲಿದೆ. ಬಿಜೆಪಿ ರಜನಿ ಪಕ್ಷದೊಡನೆ ಮೈತ್ರಿ ಮಾಡಿಕೊಳ್ಳಬಹುದು ಅಥವಾ ಮಾಡಿಕೊಳ್ಲದಿರಬಹುದು ಆದರೆ ನಟನಿಗೆ ಕಮಲ ಪಕ್ಷ ಖಚಿತವಾಗಿ ನೆರವಾಗಲಿದೆ.ಡಿಎಂಕೆಯನ್ನು ತಮಿಳುನಾಡಿನಲ್ಲಿ ಸೋಲಿಸುವ ಕನಸು ಹೊಂದಿರುವ ರಜನಿಗೆ ಕೇಸರಿ ಪಾಳಯದ ನೆರವು ಸಿಗಲಿದೆ ಎಂದು ಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


