ದೇಶ

ರಾಜಕೀಯ ಪಕ್ಷ ಸ್ಥಾಪನೆ ನಿರ್ಧಾರದಿಂದ ಹಿಂದೆಸರಿದ ರಜನಿಕಾಂತ್: ಸಹೋದರನ ಪ್ರತಿಕ್ರಿಯೆ ಹೀಗಿದೆ...

ರಜನಿಕಾಂತ್ ರಾಜಕೀಯ ಪಕ್ಷ ಸ್ಥಾಪನೆ ನಿರ್ಧಾರದಿಂದ ಹಿಂದೆಸರಿದಿರುವುದು ಈಗ ದೇಶಾದ್ಯಂತ ಚರ್ಚೆಯ ವಿಷಯ. ಈ ಬಗ್ಗೆ ರಜನಿಕಾಂತ್ ಅವರ ಸಹೋದರ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯ ಪಕ್ಷ ಸ್ಥಾಪನೆ ನಿರ್ಧಾರದಿಂದ ಹಿಂದೆಸರಿದ ರಜನಿಕಾಂತ್: ಸಹೋದರನ ಪ್ರತಿಕ್ರಿಯೆ ಹೀಗಿದೆ...
ಸಹೋದರನ ಜೊತೆ ಸೂಪರ್ ಸ್ಟಾರ್ ರಜನಿಕಾಂತ್
Published On :

ಬೆಂಗಳೂರು: ರಜನಿಕಾಂತ್ ರಾಜಕೀಯ ಪಕ್ಷ ಸ್ಥಾಪನೆ ನಿರ್ಧಾರದಿಂದ ಹಿಂದೆಸರಿದಿರುವುದು ಈಗ ದೇಶಾದ್ಯಂತ ಚರ್ಚೆಯ ವಿಷಯ. ಈ ಬಗ್ಗೆ ರಜನಿಕಾಂತ್ ಅವರ ಸಹೋದರ ಪ್ರತಿಕ್ರಿಯೆ ನೀಡಿದ್ದಾರೆ. 

ಸಹೋದರನ ನಿರ್ಧಾರವನ್ನು ಬೆಂಬಲಿಸಿರುವ ರಜನಿಕಾಂತ್ ಅವರ ಸಹೋದರ ಆರ್ ಸತ್ಯನಾರಾಯಣ ರಾವ್, ಇದು ನನ್ನ ಸಹೋದರನ ಇಚ್ಛೆಯಾಗಿದ್ದು, ನಿಧಾರವನ್ನು ಬದಲಾಯಿಸುವುವಂತೆ ಮನಃಪರಿವರ್ತನೆ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಜನತೆಗೆ ರಜನಿ ಪಕ್ಷ ಸ್ಥಾಪನೆಯ ಬಗ್ಗೆ ಸಾಕಷ್ಟು ನಿರೀಕ್ಷೆಗಳಿತ್ತಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ನಾವು ಸಹ ರಜನಿಕಾಂತ್ ರಾಜಕೀಯ ಪ್ರವೇಶಿಸುತ್ತಾರೆ ಎಂದು ನಂಬಿದ್ದೆವು ಎಂದಿದ್ದಾರೆ. 

ರಜನಿಕಾಂತ್ ಆರೋಗ್ಯದ ಕಾರಣಗಳನ್ನು ನೀಡಿದ್ದಾರೆ, ಆದ್ದರಿಂದ ಒತ್ತಾಯ ಮಾಡುವುದಕ್ಕೆ ಸಾಧ್ಯವಿಲ್ಲ. ಈಗ ಅದು ಅವರ ಇಚ್ಛೆ, ಅವರು ಯಾವುದೇ ನಿರ್ಧಾರ ಕೈಗೊಂಡಿದ್ದರೂ ಅದು ಸರಿಯಾಗಿರುತ್ತದೆ ಎಂದು ರಾವ್ ತಿಳಿಸಿದ್ದು, ರಜನಿಕಾಂತ್ ಆರೋಗ್ಯ ವಿಚಾರಿಸಲು ಸೋಮವಾರವ ಕರೆ ಮಾಡಿ ಮಾತನಾಡಿದ್ದಾಗಿ ತಿಳಿಸಿದ್ದಾರೆ. 

ಈ ತಿಂಗಳ ಪ್ರಾರಂಭದಲ್ಲಿ ರಜನಿಕಾಂತ್ ಬೆಂಗಳೂರಿನಲ್ಲಿರುವ ಅವರ ಸಹೋದರನ ಮನೆಗೆ ತೆರಳಿ ಆಶೀರ್ವಾದ ಪಡೆದು ಬಂದಿದ್ದರು. ರಜನಿಕಾಂತ್ ಗೆ ಗುರು ಕೃಪೆ ಇದೆ. ಅವರು ಹೇಳಿದ್ದನ್ನು ಮಾಡಿಯೇ ಮಾಡುತ್ತಾರೆ, ಹಾಗೂ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಸಹೋದರ ಸತ್ಯನಾರಾಯಣ ರಾವ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.