ರೈತರ ಪ್ರತಿಭಟನೆ: ಪಂಜಾಬ್ ನಲ್ಲಿ 1,500 ಕ್ಕೂ ಹೆಚ್ಚು ಟೆಲಿಕಾಂ ಟವರ್ ಗಳಿಗೆ ಹಾನಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳಿಂದ ಅಂಬಾನಿ-ಅದಾನಿಯಂತಹ ಉದ್ಯಮಿಗಳಿಗೆ ಲಾಭದಾಯಕ ಎಂದು ಕಾಯ್ದೆಯನ್ನು ವಿರೋಧಿಸಿತ್ತಿರುವ ಅನೇಕರು ವದಂತಿ ಹಬ್ಬಿಸಿದ್ದರು.

ಪಂಜಾಬ್: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳಿಂದ ಅಂಬಾನಿ-ಅದಾನಿಯಂತಹ ಉದ್ಯಮಿಗಳಿಗೆ ಲಾಭದಾಯಕ ಎಂದು ಕಾಯ್ದೆಯನ್ನು ವಿರೋಧಿಸಿತ್ತಿರುವ ಅನೇಕರು ವದಂತಿ ಹಬ್ಬಿಸಿದ್ದರು. ಈಗ ಪಂಜಾಬ್ ನಲ್ಲಿರುವ ರೈತ ಸಮುದಾಯದ ಬಹುತೇಕ ಮಂದಿ ಇದನ್ನೇ ನಿಜವೆಂದು ಭಾವಿಸಿ ತಮ್ಮ ಆಕ್ರೋಶವನ್ನು ಅಂಬಾನಿ ನೇತೃತ್ವದ ಜಿಯೋ ಮೊಬೈಲ್ ಟವರ್ ಗಳ ಮೇಲೆ ತಿರುಗಿಸಿದ್ದಾರೆ. ಪರಿಣಾಮ ಈವರೆಗೂ 1,500 ಟೆಲಿಕಾಂ ಟವರ್ ಗಳು ಹಾನಿಗೊಳಗಾಗಿದೆ.
ಟವರ್-ಇನ್ಫ್ರಾಸ್ಟ್ರಕ್ಚರ್ ಪ್ರೊವೈಡರ್ ಅಸೋಸಿಯೇಷನ್ (ಟಿಎಐಪಿಎ) ಪ್ರಕಾರ ರಾಜ್ಯದಲ್ಲಿ ಕನಿಷ್ಠ 1,600 ಟವರ್ ಗಳಿಗೆ ಹಾನಿಯಾಗಿದೆ.
ರೈತರು ತಮ್ಮ ಆಕ್ರೋಶವನ್ನು ಜಿಯೋ ಸಂಸ್ಥೆಯ ಮೇಲೆ ತೋರುತ್ತಿದ್ದು, ಕೆಲೆವಡೆಗೆ ಟವರ್ ಗಳಿಗೆ ಅಗತ್ಯವಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ ಇನ್ನೂ ಕೆಲವೆಡೆ ಹಾನಿಗೊಳಪಡಿಸುತ್ತಿದ್ದಾರೆ. ಮತ್ತೆ ಕೆಲವೆಡೆ ಜಿಯೋ ಫೈಬರ್ ಕೇಬಲ್ ಗಳನ್ನು ಕಡಿತಗೊಳಿಸುತ್ತಿದ್ದಾರೆ.
ಮತ್ತೊಂದು ವಿಲಕ್ಷಣ ಪ್ರಕರಣದಲ್ಲಿ ಟವರ್ ಬಳಿ ಇದ್ದ ಜನರೇಟರ್ ನ್ನು ಕೊಂಡೊಯ್ದು ಸ್ಥಳೀಯ ಗುರುದ್ವಾರಕ್ಕೆ ನೀಡಲಾಗಿತ್ತು. ಅಷ್ಟೇ ಅಲ್ಲದೇ ಅನೇಕ ಮಂದಿ ಜಿಯೋ ನೌಕರರಿಗೆ ಬೆದರಿಕೆ ಹಾಕಲಾಗಿದ್ದರ ವಿಡಿಯೋ ಸಹ ವೈರಲ್ ಆಗತೊಡಗಿತ್ತು. ಇದರಿಂದ ಮೊಬೈಲ್ ನೆಟ್ವರ್ಕ್ ಪೂರೈಕೆದಾರ ಸಂಸ್ಥೆಗಳು ಸಮಸ್ಯೆ ಎದುರಿಸುತ್ತಿವೆ.
ರೈತರು ಟವರ್ ಗಳಿಗೆ ಹಾನಿಮಾಡಿದ್ದರೂ ಸಹ ಯಾವುದೇ ಎಫ್ಐಆರ್, ಪ್ರಕರಣ ದಾಖಲಾಗಿಲ್ಲ. ಟವರ್ ಗಳಿಗೆ ಹಾನಿ ಮಾಡುತ್ತಿರುವ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಅಮರಿಂದರ್ ಸಿಂಗ್, ರೈತರಿಗೆ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


