ಜಮ್ಮು-ಕಾಶ್ಮೀರ: ಸೇನೆಯ ಬ್ಯಾರಕ್ ಕುಸಿದು ಬಿದ್ದು ಇಬ್ಬರು ಯೋಧರು ಹುತಾತ್ಮ, ಒಬ್ಬರಿಗೆ ಗಾಯ
ಮಿಲಿಟರಿ ಬ್ಯಾರಕ್(ಸೈನಿಕರು ಉಳಿದುಕೊಳ್ಳುವ ಸಾಲುಮನೆಗಳು) ಕುಸಿದುಬಿದ್ದು ಇಬ್ಬರು ಯೋಧರು ಹುತಾತ್ಮರಾಗಿ ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಮಚ್ಚೆಡಿ ಎಂಬಲ್ಲಿ ಸಂಭವಿಸಿದೆ.

ಜಮ್ಮು-ಕಾಶ್ಮೀರ: ಮಿಲಿಟರಿ ಬ್ಯಾರಕ್(ಸೈನಿಕರು ಉಳಿದುಕೊಳ್ಳುವ ಸಾಲುಮನೆಗಳು) ಕುಸಿದುಬಿದ್ದು ಇಬ್ಬರು ಯೋಧರು ಹುತಾತ್ಮರಾಗಿ ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಮಚ್ಚೆಡಿ ಎಂಬಲ್ಲಿ ಸಂಭವಿಸಿದೆ.
ಕತುವಾ ಜಿಲ್ಲಾ ಕೇಂದ್ರದಿಂದ 150 ಕಿಲೋ ಮೀಟರ್ ದೂರದಲ್ಲಿ ಬಿಲ್ಲಾವರ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಚ್ಚೆಡಿ ಎಂಬಲ್ಲಿ ಬ್ಯಾರಕ್ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಜಮ್ಮು-ಕಾಶ್ಮೀರ ಜಿಲ್ಲಾಡಳಿತ ತಿಳಿಸಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಸೇನಾ ಯೋಧರು ಬ್ಯಾರಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗೋಡೆ ಹಠಾತ್ತನೆ ಕುಸಿದುಬಿದ್ದು ಮೂವರು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಎಸ್ ಡಿ ಎಚ್ ಬಿಲ್ಲವರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧರನ್ನು ಸೋನಿಪತ್ ನ ಸುಬೇದರ್ ಎಸ್ ಎನ್ ಸಿಂಗ್ ಹಾಗೂ ಸಾಂಬಾದ ನಾಯಕ್ ಪರ್ವೇಝ್ ಕುಮಾರ್ ಎಂದು ಗುರುತಿಸಲಾಗಿದೆ. ಪಾಣಿಪತ್ ನ ಮತ್ತೊಬ್ಬ ಯೋಧ ಸೆಪೊಯ್ ಮಂಗಲ್ ಸಿಂಗ್ ಎಂಬುವವರು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


